ಸಾವ್ಯ: ಇಲ್ಲಿಯ ರಾಧಿಕ ನಿವಾಸದ ನಾಗೇಶ್ ಆಚಾರಿ ಯವರು ಅನಾರೋಗ್ಯದಿಂದ ಆಕಸ್ಮಿಕವಾಗಿ ಕುಸಿದುಬಿದ್ದು ಮೃತಪಟ್ಟ ಘಟನೆ ಡಿ.13 ರಂದು ನಡೆದಿದೆ.
ಶ್ರೀಮತಿ ಜಯಶ್ರೀ ರವರ ದೂರಿನಂತೆ ನಾಗೇಶ ಆಚಾರಿ (37) ಎಂಬವರು ವಿಪರೀತ ಮದ್ಯಸೇವನೆಯ ಅಭ್ಯಾಸ ಹೊಂದಿದ್ದು, ಸರಿಯಾಗಿ ಆಹಾರ ಸೇವಿಸದೇ ನಿಶ್ಯಕ್ತಿಯಿಂದ ಬಳಲುತ್ತಿದ್ದುದಲ್ಲದೇ ವಿಪರೀತ ವಾಂತಿ ಕಾಣಿಸಿಕೊಂಡು ರಕ್ತದೊತ್ತಡ ತೀರಾ ಕಡಿಮೆಯಾಗಿ ಅನಾರೋಗ್ಯದಿಂದ ಬಳಲುತ್ತಿದ್ದವರು ಡಿ.13 ರಂದು ಸಂಜೆ ಸಾವ್ಯ ಗ್ರಾಮದ ರಾಧಿಕ ನಿವಾಸ ಎಂಬಲ್ಲಿ ತನ್ನ ಮನೆಯಂಗಳದಲ್ಲಿ ಒಮ್ಮೆಲೆ ಕುಸಿದುಬಿದ್ದು, ಪ್ರಜ್ಞಾಹೀನರಾದವರನ್ನು ಉಪಚರಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಾತ್ರಿ ಸುಮಾರು 8.00 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.