19.2 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅವಾಚ್ಯವಾಗಿ ಬೈದು ಹಲ್ಲೆ ,ದೈಹಿಕ ಹಿಂಸೆ ಆರೋಪ: ಪತಿಯ ವಿರುದ್ಧ ಪತ್ನಿ ವೇಣೂರು ಪೊಲೀಸ್ ಠಾಣೆಗೆ ದೂರು

ಮೂಡುಕೋಡಿ : ಇಲ್ಲಿಯ ಶಿವಕೃಪಾ ಎಂಬಲ್ಲಿ ನವೀನ್ ಎಂಬಾತನು ತನ್ನ ಪತ್ನಿ ಭಾಗ್ಯ ರವರಿಗೆ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ.16 ರಂದು ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಭಾಗ್ಯ ರವರು ಸುಮಾರು 16 ವರ್ಷಗಳ ಹಿಂದೆ ನವೀನ್ ರವನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇರುತ್ತಾರೆ, ನವೀನ್ ಮದುವೆಯಾಗಿ ಸುಮಾರು 5 ವರ್ಷ ಅನ್ಯೋನ್ಯವಾಗಿದ್ದು ನಂತರ ವಿಪರೀತ ಮದ್ಯ ಸೇವಿಸುವ ಚಟಹೊಂದಿ ವಿನಾ: ಕಾರಣ ಆಗಾಗ ಕ್ಷುಲ್ಲಕ ವಿಚಾರದಲ್ಲಿ ಮಾತಿನ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಡಿ.15 ರಂದು ರಾತ್ರಿ ಆಪಾದಿತನು ತನ್ನ ಮನೆಯಾದ ಮೂಡುಕೋಡಿ ಗ್ರಾಮದ ಶಿವಕೃಪಾ ಎಂಬಲ್ಲಿ ಭಾಗ್ಯ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿದೆ ಎಂದು ಭಾಗ್ಯ ರವರು ದೂರಿದ್ದಾರೆ.

    Related posts

    ಉಜಿರೆ ಶ್ರೀ ಧ.ಮಂ ಕಾಲೇಜು ವತಿಯಿಂದ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರಿಗೆ ಸನ್ಮಾನ

    Suddi Udaya

    ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಶುಭ ಹಾರೈಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

    Suddi Udaya

    ಧರ್ಮಸ್ಥಳ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಇದರ ವಸ್ತು ಪ್ರದರ್ಶನ ಮಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರಿಂದ ಉದ್ಘಾಟನೆ

    Suddi Udaya

    ನಡ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಕರ ಸಮಾಲೋಚನ ಸಮಾರಂಭ

    Suddi Udaya

    ವೇಣೂರು: ಪಡ್ಡಂದಡ್ಕ ಕಟ್ಟೆ ನಿವಾಸಿ ಪ್ರಗತಿಪರ ಕೃಷಿಕ ಕೆ ಮಹಮ್ಮದ್ ನಿಧನ

    Suddi Udaya

    ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ವೈದ್ಯರ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ

    Suddi Udaya
    error: Content is protected !!