29.2 C
ಪುತ್ತೂರು, ಬೆಳ್ತಂಗಡಿ
December 20, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು : ಶಿವ ಫ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ – ಬಂದಾರು ಆಶ್ರಯದಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರ ತ್ರೋಬಾಲ್ ಮತ್ತು ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ

ಬಂದಾರು :ಶಿವ ಫ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ – ಬಂದಾರು ಇದರ ಆಶ್ರಯದಲ್ಲಿ 9 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಮಹಿಳೆಯರ ತ್ರೋಬಾಲ್ ಮತ್ತು ಪುರುಷರ ಮತ್ತು ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ಡಿ. 15 ರಂದು ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗ – ಮೈರೋಳ್ತಡ್ಕದಲ್ಲಿ ನಡೆಯಿತು.

ಕುರಾಯ ಶಿವ ಫ್ರೆಂಡ್ಸ್ ಅಧ್ಯಕ್ಷ ಸುಂದರ ಗೌಡ ಖಂಡಿಗ ಸಭಾದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುಪತಿ ಭಟ್ ಅನಾಬೆ , ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಸಂದೀಪ್ ಎಂ ಮಿತ್ತೂರು ಮೆಸ್ಕಾಂ ಇಲಾಖೆ ಮಂಗಳೂರು, ಪದ್ಮುಂಜ ಸಿ ಎ ಬ್ಯಾಂಕ್ ನಿರ್ದೇಶಕರಾದ ಅಶೋಕ ಗೌಡ ಪಾಂಜಾಳ, ದಿನೇಶ್ ಗೌಡ ದಾಸರಕೋಡಿ ಭಾಗವಹಿಸಿದರು.


ಕು. ಕುಸುಮ ಎಂ ಎಸ್ ನೆರೋಲ್ದಪಲ್ಕೆ -ಪೆರ್ಲ ಬೈಪಾಡಿ. – ಯುವ ಗಾಯಕಿ, ಚಂದ್ರಹಾಸ ಕುಂಬಾರ ಶ್ರೀರಾಮನಗರ ಬಂದಾರು – ಯುವ ಕವಿ, ಕು. ತೇಜಸ್ವಿನಿ ಪೂಜಾರಿ ಬೊಲ್ಜೆ – ಬಂದಾರು, ಸೀನಿಯರ್ & ಜೂನಿಯರ್ ವಿಭಾಗದಲ್ಲಿ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಿನ್ನದ ಪದಕ ವಿಜೇತೆ, ಶ್ರೇಯಸ್ ಬೆಂಗಾಯಿ ರಾಷ್ಟ ಮಟ್ಟದ ಕ್ರೀಡಾಪಟು, ಇವರಿಗೆ ಸನ್ಮಾನ ಹಾಗೂ ಸಂದೀಪ್ ಎಂ ಮಿತ್ತೂರು ಮೆಸ್ಕಾಂ ಸಿಬ್ಬಂದಿ ಇವರಿಗೆ ಬೀಳ್ಕೊಡುಗೆ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿದರು.


ಶಿವಫ್ರೆಂಡ್ಸ್ ಸದಸ್ಯರೆಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ನಾ’ವುಜಿರೆ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ನೈನಾಡು :ಪಿಂಟೊ ಬೇಕರಿ ಸಂಸ್ಥೆಯ ಮಾಲಕ ಸಿಲ್ವೆಸ್ಟರ್ ಪಿಂಟೊ ನಿಧನ

Suddi Udaya

ಮಡಂತ್ಯಾರು: ‘ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ’ ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಡಿ.19: ಅಳದಂಗಡಿ ನಮ ಮಾತೆರ್ಲ ಒಂಜೇ ಕಲಾ ತಂಡದ 18ನೇ ವಾರ್ಷಿಕೋತ್ಸವ: ಯಕ್ಷಗಾನ ಬಯಲಾಟ, ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ:ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವು

Suddi Udaya

ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ

Suddi Udaya
error: Content is protected !!