ನಿಡ್ಲೆ: ಇಲ್ಲಿಯ ಕಂರ್ಬಿತ್ತಿಲು ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಭಾರೀ ಗಾತ್ರದ ಮರವು ರಸ್ತೆಗೆ ವಾಲಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿದ್ದು ಅರಣ್ಯ ಇಲಾಖೆಯವರಿಗೆ ಹಲವಾರು ಭಾರಿ ಮಾಹಿತಿ ನೀಡಿದರು ಪ್ರಯೋಜನವಾಗಿಲ್ಲ, ಈ ಬಗ್ಗೆ ಡಿ.13 ರಂದು ಸುದ್ದಿ ಉದಯ ನ್ಯೂಸ್ ನಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ನಿಡ್ಲೆ – ಕಳೆಂಜ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಹಾಗೂ ಅರಣ್ಯ ಇಲಾಖೆಯ ಉಪಸ್ಥಿತಿಯಲ್ಲಿ ಡಿ.14 ರಂದು ಮರವನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಕೊರಗಪ್ಪ ಗೌಡ ಪರಹಿತ್ತಿಲು, ಗಿರೀಶ್ ಗೌಡ ಬಾರಗುಡ್ಡೆ, ಚಂದ್ರಶೇಖರ ಗೌಡ ಒಂಟ್ಯಾನ, ಲಿಂಗಪ್ಪ ಗೌಡ ಕೊಲಡ್ಕ ಮರವನ್ನು ತೆರವುಗೊಳಿಸಿ ಸಹಕರಿಸಿದರು.