30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

ಉಜಿರೆ ಎಸ್.ಡಿ.ಎಂ ಮಲ್ಟಿಷ್ಪೆಷಾಲಿಟಿ ಆಸ್ಪತ್ರೆಯ 2025ನೇ ಸಾಲಿನ ಕ್ಯಾಲೆಂಡರ್‌ನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ನಿತ್ಯ ಪಂಚಾಂಗದೊಂದಿಗೆ ಸಂದರ್ಶನ ವೈದ್ಯರ ಲಭ್ಯತೆಯ ವಿವರ, ಆಸ್ಪತ್ರೆಯ ರಜಾ ದಿನಗಳ ವಿವರ, ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳು, ಮುಖ್ಯ ವಿಷಯಗಳನ್ನು ಬರೆದಿಡಲು ಪ್ರತ್ಯೇಕ ಜಾಗ ಹೊಂದಿರುವ ಕ್ಯಾಲೆಂಡರ್ ಇದಾಗಿದೆ. ಇದರಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಉಜಿರೆ ಎಸ್.ಡಿ.ಎಂ ಮಲ್ಟಿಷ್ಪೆಷಾಲಿಟಿ ಆಸ್ಪತ್ರೆಯ ಸಂಪೂರ್ಣ ಮಾಹಿತಿ ಹಾಗೂ ಅಪಾಂಯಿಂಟ್‌ಮೆಂಟ್ ಕೂಡ ಪಡೆಯಲು ಅವಕಾಶ ಇರುತ್ತದೆ. ಅತ್ಯಾಕರ್ಷಕ ಮತ್ತು ಉಪಯುಕ್ತವಾದ ಕ್ಯಾಲೆಂಡರ್ ಇದಾಗಿದ್ದು, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕರಾದ ಡಾ| ದೇವೆಂದ್ರ ಕುಮಾರ್. ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ನಿಂದ ಮಚ್ಚಿನ ಸ.ಪ್ರೌ. ಶಾಲೆಗೆ 200 ತಟ್ಟೆ ಹಾಗೂ 2 ತಟ್ಟೆ ಇಡುವ ಸ್ಟಾಂಡ್ ಕೊಡುಗೆ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯಿತ್ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿ ಆಯ್ಕೆ

Suddi Udaya

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ಅಕ್ರಮ ಮರ ಕಡಿತಲೆ ಪ್ರಕರಣ: ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎನ್. ಅಮಾನತು

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

Suddi Udaya
error: Content is protected !!