ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರ ಬಾಕಿಮಾರು ಗದ್ದೆಯಲ್ಲಿ ಡಿ. 29ರಂದು ನಡೆಯುವ ಶೇಷ ನಾಗ ಚೋಡು ಕರೆ ಕಂಬಳದ ಪೂರ್ವ ಸಿದ್ಧತಾ ಸಭೆಯು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಶರರಾದ ಡಾ| ಎಮ್ ಹರ್ಷ ಸಂಪಿಗೆತ್ತಾಯ ಇವರ ಉಪಸ್ಥಿತಿಯಲ್ಲಿ ಡಿ. 15ರಂದು ದೇವಸ್ಥಾನದಲ್ಲಿ ನಡೆಯಿತು.
ಕಂಬಳದ ಆಮಂತ್ರಣ ಪತ್ರಿಕೆ ವಿತರಿಸುವ ಬಗ್ಗೆ ಹಾಗೂ ಕರೆ ನಿರ್ಮಿಸುವ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಗೌರವ ಸಲಹೆಗಾರರು ಗ್ರಾಮಸ್ಥರು ಉಪಸ್ಥಿತರಿದ್ದರು.