28 C
ಪುತ್ತೂರು, ಬೆಳ್ತಂಗಡಿ
December 18, 2024
ಗ್ರಾಮಾಂತರ ಸುದ್ದಿ

ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ

ಗುಂಡೂರಿ: ಯಾವ ಕೆಲಸವೇ ಸರಿ ಅದರಲ್ಲಿ ಶ್ರದ್ದೆ, ಭಕ್ತಿ, ನಿಷ್ಠೆ ಇದ್ದಲ್ಲಿ ವ್ಯಕ್ತಿ ಗುರಿ ಮುಟ್ಟಿ ಸಮಾಜಕ್ಕೆ ಬೆಳಕಾಗಲು ಸಾಧ್ಯ ಎಂದು ಗುಂಡೂರಿ ಗ್ರಾಮದ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಡಿ.೧೫ರಂದು ನಡೆದ “ಅಭಿನಂದನಾ ಕಾರ್ಯಕ್ರಮ”ದಲ್ಲಿ ಮೂಡಬಿದರೆಯ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್ ಯುವರಾಜ್ ಜೈನ್ ಹೇಳಿದರು.

ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಯುವರಾಜ್ ಜೈನ್ ರವರು ನಮ್ಮ ಪರಿಸರದಲ್ಲಿ ಅದೆಷ್ಟೋ ನಮಗೆ ಕಲಿಸಲಾಗದಂತಹ ಪಾಠಗಳು ಇವೆ.ಅದನ್ನು ನಾವು ಹುಡುಕಬೇಕಷ್ಟೇ.ಉದಾಹರಣೆಗೆ ಈ ಶ್ರೀ ಗುರು ಚೈತನ್ಯ ಸೇವಾಶ್ರಮ.ಇಲ್ಲಿ ವಾಸಿಸುವ ಆಶ್ರಮವಾಸಿಗಳ ಕಳೆದ ತೆರೆಯ ಮೆರೆಯ ಜೀವನ ಕಥೆಗಳು ಯುವ ಪೀಳಿಗೆಗೆ ಜೀವನ ಪಾಠವಿದು.ಇಂತಹ ಮನುಕುಲದ ಸೇವೆಮಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ಪಡುವ ಸೇವಾಶ್ರಮದ ಮುಖ್ಯಸ್ಥ ಹೊನ್ನಯ್ಯ ರವರು ಸಮಾಜ ಸೇವೆಗೆ ಉದಾಹರಣೆ ಆಗಿದ್ದಾರೆ ಎಂದು ತಿಳಿಸಿದರು.

ಎಕ್ಸಲೆಂಟ್ ಪಿ.ಯು.ಕಾಲೇಜಿನ ಆರ್ಮಿ ವಿಂಗ್ ಎನ್.ಸಿ.ಸಿಯ ಆಫೀಸರ್ ಲೆ|ಮಹೇಂದ್ರ ಜೈನ್ ಇವರ ಮಾರ್ಗದರ್ಶನದಲ್ಲಿ ತನ್ನ ಎನ್.ಸಿ.ಸಿ ಕೆಡೆಟ್‌ಗಳಿಂದ ಆಶ್ರಮವಾಸಿಗಳಿಗೆ ಮನೋರಂಜನೆ ಕಾರ್ಯಕ್ರಮ ನಡೆಯಿತು. ಎನ್‌ಸಿಸಿಯವರು ಸೇವಾಶ್ರಮಕ್ಕೆ ಅಗತ್ಯ ಸಾಮಾಗ್ರಿಗಳ ಜತೆ ತಿಂಗಳಿಗೆ ಆಗುವಷ್ಟು ಜೀನಸಿ ಸಾಮಾಗ್ರಿಗಳ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ೨೦೨೪ರ ಸಾಲಿನ ದ.ಕ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಸೇವಾಶ್ರಮದ ಹೊನ್ನಯ್ಯ ರವರು ನಿರೂಪಿಸಿದರು. ಕು| ಕ್ಷಿತಿಕ್ಷಾ ಸ್ವಾಗತಿಸಿ ಧನ್ಯವಾದವಿತ್ತರು. ಶ್ರೀಮತಿ ಸೌಜನ್ಯ ಸಜ್ಜನ್ ಜೈನ್, ಶ್ರೀಮತಿ ರೇಣುಕಾ, ರಂಜಿತ್ ನಡ್ತಿಕಲ್ ಮತ್ತಿತ್ತರು ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕೊಕ್ಕಡ ವಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಸಮಾರಂಭ

Suddi Udaya

ಮಚ್ಚಿನ: ಎ.30-ಮೇ.03, ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವ ದೇವರುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ನಿಡ್ಲೆ ಸರಕಾರಿ ಪ್ರೌಢ ಶಾಲೆಯ ಕಂಪ್ಯೂಟರ್ ಶಿಕ್ಷಕಿ ಪ್ರಭಾ ಟಿ. ತಲೇಕಿ ನಿಧನ: ಪ್ರಭಾ ಅಪೇಕ್ಷೆಯಂತೆ ಮಣಿಪಾಲ ಮೆಡಿಕಲ್ ಕಾಲೇಜಿಗೆ ಮೃತದೇಹ ದಾನ

Suddi Udaya

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya

ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ ಒಕ್ಕೂಟದ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

Suddi Udaya
error: Content is protected !!