September 6, 2026
ಗ್ರಾಮಾಂತರ ಸುದ್ದಿ

ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ

ಗುಂಡೂರಿ: ಯಾವ ಕೆಲಸವೇ ಸರಿ ಅದರಲ್ಲಿ ಶ್ರದ್ದೆ, ಭಕ್ತಿ, ನಿಷ್ಠೆ ಇದ್ದಲ್ಲಿ ವ್ಯಕ್ತಿ ಗುರಿ ಮುಟ್ಟಿ ಸಮಾಜಕ್ಕೆ ಬೆಳಕಾಗಲು ಸಾಧ್ಯ ಎಂದು ಗುಂಡೂರಿ ಗ್ರಾಮದ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಡಿ.೧೫ರಂದು ನಡೆದ “ಅಭಿನಂದನಾ ಕಾರ್ಯಕ್ರಮ”ದಲ್ಲಿ ಮೂಡಬಿದರೆಯ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್ ಯುವರಾಜ್ ಜೈನ್ ಹೇಳಿದರು.

ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಯುವರಾಜ್ ಜೈನ್ ರವರು ನಮ್ಮ ಪರಿಸರದಲ್ಲಿ ಅದೆಷ್ಟೋ ನಮಗೆ ಕಲಿಸಲಾಗದಂತಹ ಪಾಠಗಳು ಇವೆ.ಅದನ್ನು ನಾವು ಹುಡುಕಬೇಕಷ್ಟೇ.ಉದಾಹರಣೆಗೆ ಈ ಶ್ರೀ ಗುರು ಚೈತನ್ಯ ಸೇವಾಶ್ರಮ.ಇಲ್ಲಿ ವಾಸಿಸುವ ಆಶ್ರಮವಾಸಿಗಳ ಕಳೆದ ತೆರೆಯ ಮೆರೆಯ ಜೀವನ ಕಥೆಗಳು ಯುವ ಪೀಳಿಗೆಗೆ ಜೀವನ ಪಾಠವಿದು.ಇಂತಹ ಮನುಕುಲದ ಸೇವೆಮಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ಪಡುವ ಸೇವಾಶ್ರಮದ ಮುಖ್ಯಸ್ಥ ಹೊನ್ನಯ್ಯ ರವರು ಸಮಾಜ ಸೇವೆಗೆ ಉದಾಹರಣೆ ಆಗಿದ್ದಾರೆ ಎಂದು ತಿಳಿಸಿದರು.

ಎಕ್ಸಲೆಂಟ್ ಪಿ.ಯು.ಕಾಲೇಜಿನ ಆರ್ಮಿ ವಿಂಗ್ ಎನ್.ಸಿ.ಸಿಯ ಆಫೀಸರ್ ಲೆ|ಮಹೇಂದ್ರ ಜೈನ್ ಇವರ ಮಾರ್ಗದರ್ಶನದಲ್ಲಿ ತನ್ನ ಎನ್.ಸಿ.ಸಿ ಕೆಡೆಟ್‌ಗಳಿಂದ ಆಶ್ರಮವಾಸಿಗಳಿಗೆ ಮನೋರಂಜನೆ ಕಾರ್ಯಕ್ರಮ ನಡೆಯಿತು. ಎನ್‌ಸಿಸಿಯವರು ಸೇವಾಶ್ರಮಕ್ಕೆ ಅಗತ್ಯ ಸಾಮಾಗ್ರಿಗಳ ಜತೆ ತಿಂಗಳಿಗೆ ಆಗುವಷ್ಟು ಜೀನಸಿ ಸಾಮಾಗ್ರಿಗಳ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ೨೦೨೪ರ ಸಾಲಿನ ದ.ಕ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಸೇವಾಶ್ರಮದ ಹೊನ್ನಯ್ಯ ರವರು ನಿರೂಪಿಸಿದರು. ಕು| ಕ್ಷಿತಿಕ್ಷಾ ಸ್ವಾಗತಿಸಿ ಧನ್ಯವಾದವಿತ್ತರು. ಶ್ರೀಮತಿ ಸೌಜನ್ಯ ಸಜ್ಜನ್ ಜೈನ್, ಶ್ರೀಮತಿ ರೇಣುಕಾ, ರಂಜಿತ್ ನಡ್ತಿಕಲ್ ಮತ್ತಿತ್ತರು ಉಪಸ್ಥಿತರಿದ್ದರು.

Related posts

ಅಳದಂಗಡಿಯಲ್ಲಿ ಭಕ್ತಿ ಭಾವದಿಂದ ಮೊಳಗಿದ ಹನುಮೋತ್ಸವ, ಸಾವಿರಾರು ಭಕ್ತರು ಭಾಗಿ ಕುಣಿತ ಭಜನೆ, ಹನುಮ ಯಾಗ, ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ, ಲಂಕಾದಹನ, ಶಿವಾಜಿ‌ ನಾಟಕ

Suddi Udaya

ಬೆಳ್ತಂಗಡಿ ಪ್ರಥಮ‌‌ ದರ್ಜೆ ಕಾಲೇಜಿನಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ”- “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya

ಪ್ರತಿಷ್ಠಿತ ಸಿ.ಎಸ್.ಐ.ಆರ್ ನಿರ್ದೇಶಕ ಹುದ್ದೆಗೆ ಉಜಿರೆ ಕಾಲೇಜಿನ ಹಿರಿಯ ವಿದ್ಯಾರ್ಥಿ ನೇಮಕಾತಿ

Suddi Udaya

ಬಂಗೇರಕಟ್ಟೆ ಬದ್ರಿಯಾ ಜುಮ್ಮಾ ಮಸ್ಜಿದ್ ನೂತನ ಅಧ್ಯಕ್ಷರಾಗಿ ಇಕ್ಬಾಲ್ , ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್ ಆಯ್ಕೆ

Suddi Udaya

103 ವರ್ಷದ ಪಾರ್ವತಮ್ಮ ರಿಂದ ಧಮ೯ಸ್ಥಳಕ್ಕೆ ಪಾದಯಾತ್ರೆ: ಅಜ್ಜಿಯ ದೈವಭಕ್ತಿ ಮತ್ತು ದೇಶಭಕ್ತಿಗೆ ‌ಸಾವ೯ಜನಿಕರ ಮೆಚ್ಚುಗೆ

Suddi Udaya
error: Content is protected !!