28 C
ಪುತ್ತೂರು, ಬೆಳ್ತಂಗಡಿ
December 18, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ 2 ದಿನದ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಸಿ.ಒ.ಡಿ.ಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಇವುಗಳ ಸಹಕಾರದಿಂದ ಕ್ಲಸ್ಟರ್ ಮಟ್ಟದ ಸ್ಥಳೀಯ ಸಂಪನ್ಮೂಲ ಕ್ರೋಡೀಕರಣ ಕುರಿತು ತರಬೇತಿ ಕಾರ್ಯಕ್ರಮವು ಬೆಳ್ತಂಗಡಿ ಜ್ಞಾನನಿಲಯದಲ್ಲಿ ಡಿ.17 ಹಾಗೂ 18 ರಂದು ನಡೆಯಿತು.

ಜ್ಞಾನ ನಿಲಯದ ನಿರ್ದೇಶಕರಾದ ವಂದನೀಯ ಫಾ. ಜೋಸೆಫ್ ಮಟ್ಟಮ್ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದರು. ಬೆಂಗಳೂರು ಕ್ರಾಸ್ ಸಂಸ್ಥೆಯ ರಾಜ್ಯ ಸಂಯೋಜಕಿ ಶ್ರೀಮತಿ ಲೈನಾ ಲಸ್ರಾದೋರವರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ.ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. 4 ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಜಿರೆ ರುಡ್ ಸೆಟ್ ನ ಹಿರಿಯ ಉಪನ್ಯಾಸಕರಾದ ಜೇಮ್ಸ್ ಅಬ್ರಹಾಂ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರುಗಳಾದ ಡಾ. ಜಯಕುಮಾರ್ ಶೆಟ್ಟಿ ಹಾಗೂ ಡಾ. ಟಿ. ಕೃಷ್ಣ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸ್ಥಳೀಯ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ತರಬೇತಿ ನೀಡಿದರು.

ಉಡುಪಿ ಸಂಪದ ಸಂಸ್ಥೆಯ ಸಿಬ್ಬಂದಿಗಳು ಪ್ರಾರ್ಥನಾ ಗೀತೆ ಹಾಡಿದರು. ಡಿ.ಕೆ.ಆರ್.ಡಿ.ಎಸ್ ಕಾರ್ಯಕರ್ತೆ ಶ್ರೀಮತಿ ಸುಶೀಲ ಕೆ.ಜಿ. ಸ್ವಾಗತಿಸಿದರು. ಮಾರ್ಕ್ ಡಿ ಸೋಜರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರಾದ ಜೋನ್ಸನ್ ವಂದಿಸಿದರು.

Related posts

ಹಿರಿಯ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ರವರು ಮನುಶ್ರೀ ದತ್ತಿ ಪ್ರಶಸ್ತಿಗೆ ಆಯ್ಕೆ

Suddi Udaya

ನ.20: ಚಾರ್ಮಾಡಿಯಲ್ಲಿ ಸಹಕಾರ ಸಪ್ತಾಹ ಸಮಾರೋಪ

Suddi Udaya

ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

Suddi Udaya

ನಿಡ್ಲೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣಾ ತರಬೇತಿ

Suddi Udaya
error: Content is protected !!