April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರಿಮಣೇಲು ಸಂತ ಜೂಡರ ಅ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

ವೇಣೂರು: ಇಲ್ಲಿನ ಕರಿಮಣೇಲು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಇತ್ತೀಚೆಗೆ ಸಂಚಾಲಕರಾದ ವಂ|ಫಾ| ಪೀಟರ್ ಅರಾನ್ಹರವರ ಅಧ್ಯಕ್ಷತೆಯಲ್ಲಿ ಶಾಲಾ ವಠಾರದಲ್ಲಿ ಜರುಗಿತು.

ವಂ|ಫಾ| ಸೈಮನ್ ಪಿಂಟೊ ಪ್ರಾಂಶುಪಾಲರು ಹೋಲಿ ರೀಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ರಾಜೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ಬಜಿರೆ, ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಉದ್ಯಮಿ ಭಾಸ್ಕರ್ ಪೈ, ಜಿನರಾಜ್ ಜೈನ್ ಮಾಲಕರು ಪದ್ಮಾಂಬ ಸಮೂಹ ಸಂಸ್ಥೆ ವೇಣೂರು, ಹೆಚ್ ಮಹಮ್ಮದ್ ನಿವೃತ್ತ ಮೆನೇಜರ್ ಸಿ ಎ ಬ್ಯಾಂಕ್ ವೇಣೂರು ಶುಭ ಹಾರೈಸಿದರು.

ಸಭೆಯಲ್ಲಿ ನಿವೃತ್ತ ಶಿಕ್ಷಕ ಎಲ್‌ .ಜೆ. ಫೆರ್ನಾಂಡಿಸ್ ಧ್ವಜಾರೋಹಣಗೈದರು. ದಿನೇಶ್ ಗೌಡ, ಉದ್ಯಮಿ ಲಾರೆನ್ಸ್ ಲೋಬೊ, ಪಿ. ಎಚ್ .ಅಶ್ರಫ್ ರವರು ಬಹುಮಾನ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಾರ್ಸೆಲಿನ್ ಲೀನಾ ಪಿರೇರಾ ಸ್ವಾಗತಿಸಿದರು. ಸಹ ಶಿಕ್ಷಕಿ ಮೀನಾ ಮೋನಿಸ್ ವರದಿ ವಾಚಿಸಿದರು.

ಅಧ್ಯಾಪಕರಾದ ಮರೆಪ್ಪ ತಳಕೇರಿ ಅತಿಥಿಗಳನ್ನು ಗೌರವಿಸಿದರು. ಸುಮಲತಾ, ಲೀಲಾವತಿ,ಸುಪ್ರಿತಾ. ಆರ್ ನಿರೂಪಿಸಿ, ರಸಿಕ, ಸುಪ್ರಿತಾ.ಎಸ್ ಧನ್ಯವಾದವಿತ್ತರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ನೃತ್ಯ ರೂಪಕಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು.

Related posts

ಮರೋಡಿ: ಜ.27 ರಂದು ಅಂಬ್ಯುಲೆನ್ಸ್ ಲೋಕಾರ್ಪಣೆ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಶೇಷ ತರಗತಿಯ ಸಮಾರೋಪ ಕಾರ್ಯಕ್ರಮ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಹೊರೆ ಕಾಣಿಕೆ ಹಾಗೂ ಪಲ್ಲಕ್ಕಿ ಸಮರ್ಪಣೆ

Suddi Udaya

ಪಡಂಗಡಿ: ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದಿಂದ ಕನಕ ಜಯಂತಿ ಆಚರಣೆ

Suddi Udaya

ಓಡಿಲ್ನಾಳ ಉ.ಹಿ.ಪ್ರಾ. ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಅಕ್ಷತಾ ಯಶೋಧರ ಶೆಟ್ಟಿ ಆಯ್ಕೆ

Suddi Udaya
error: Content is protected !!