ನಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ 2023-24 ನೇ ಸಾಲಿನ ನ್ಯಾಯತರ್ಪು ಒಕ್ಕೂಟ ಸ್ವ ಸಹಾಯ ಸಂಘಗಳ ಲಾಭಾಂಶ ವಿತರಣಾ ಕಾರ್ಯಕ್ರಮವು ಡಿ.25 ರಂದು ನಾಳ ದೇವಸ್ಥಾನದ ಅನ್ನಪೂರ್ಣ ಛತ್ರದಲ್ಲಿ ನಡೆಯಿತು.
ಒಕ್ಕೂಟ ಅಧ್ಯಕ್ಷ ಸಿದ್ದಪ್ಪ ಗೌಡ, ಉಪಾಧ್ಯಾಕ್ಷೆ ರೀತಾ, ಸದಸ್ಯೆ ಪುಷ್ಪ, ಮಾಜಿ ಅಧ್ಯಕ್ಷ ಜನಾರ್ಧನ ಗೌಡ, ಪದಾಧಿಕಾರಿಗಳು, ಸಂಘದ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರ ಉಪಸ್ಥಿತರಿದ್ದರು. ಮೇಲ್ವಿಚಾರಕ ಹರೀಶ್ ಗೌಡ, ಸೇವಾ ಪ್ರತಿನಿಧಿ ಸುಮಿತ್ರಾ ಉಪಸ್ಥಿತಿಯಲ್ಲಿ ಲಾಭಾಂಶ ವಿತರಣೆ ಮಾಡಲಾಯಿತು.