23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಬೆಳ್ತಂಗಡಿ

ಡಿ.31: ಬಳಂಜ ಬೋಂಟ್ರೊಟ್ಟುಗುತ್ತು ಧರ್ಮದೈವಗಳ ಮೂಲಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ನೇಮೋತ್ಸವ ಹಾಗೂ ಕೇತುಲ್ಲಾಯ ದೈವಕ್ಕೆ ಪಂಚಪರ್ವ ಸೇವೆ

ಬಳಂಜ: ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಧರ್ಮರಸು ದೈವ-ಕೊಡಮಣಿತ್ತಾಯ ಮೈಸಂದಾಯ-ಅಂಗಣ ಪಂಜುರ್ಲಿ ಕಲ್ಲುರ್ಟಿ-ಕಲ್ಕುಡ, ಕ್ಷೇತ್ರ ಗುಳಿ ದೈವಗಳಿಗೆ ಪ್ರಧಾನ ಕಲಶಾಭಿಷೇಕ, ವಾರ್ಷಿಕ ಪ್ರತಿಷ್ಠಾ ವರ್ಧಂತಿ ನೇಮೋತ್ಸವ ಹಾಗೂ ಕೇತುಲ್ಲಾಯ ದೈವಕ್ಕೆ ಪಂಚಪರ್ವ ಸೇವೆಯು ಡಿ.೩೧ರಂದು ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿ ಮೊಕ್ತೇಸರ ಶೀತಲ್ ಪಡಿವಾಳರ ಮಾರ್ಗದರ್ಶನದಲ್ಲಿ ಮದ್ದಡ್ಕ ಶ್ರೀನಿವಾಸ ಅಮ್ಮಣ್ಣಾಯ ಅಸ್ರಣ್ಣರ ನೇತೃತ್ವದಲ್ಲಿ ಬೋಂಟ್ರೊಟ್ಟುಗುತ್ತು ಧರ್ಮದೈವಗಳ ಮೂಲಸ್ಥಾನದಲ್ಲಿ ನಡೆಯಲಿದೆ.

ಡಿ.31ರಂದು ಬೆಳಿಗ್ಗೆ ಭಂಡಾರ ಚಾವಡಿಯಲ್ಲಿ ಪ್ರಾರ್ಥನೆ ಪುಣ್ಯಾಹ ಕಲಶ ದೈವಗಳ ಭಂಡಾರ ಇಳಿಸುವುದು, ಮೂಲ ಸ್ಥಾನದಲ್ಲಿ ತೋರಣ ಮುಹೂರ್ತ, ನಾಗ ಸನ್ನಿಧಿಯಲ್ಲಿ ತನು-ತಂಬಿಲ ಸೇವೆ, ದೈವಸ್ಥಾನದಲ್ಲಿ ಪ್ರಧಾನ, ದೈವಗಳಿಗೆ ಕಲಶಾಭಿಷೇಕ ಪರ್ವ ನಡೆಯಲಿರುವುದು. ಸಂಜೆ ದೈವಗಳ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.

Related posts

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ: ಶಿರ್ಲಾಲು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Suddi Udaya

ಉಜಿರೆ: ಶ್ರೀ ಧ. ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಜನ್ಮದಿನಾಚರಣೆ

Suddi Udaya

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ಕೊನೆಯ ದಿನ

Suddi Udaya

ಡಿ.7: ಜನರ ಬಳಿಗೆ ತಾಲೂಕು ಆಡಳಿತ; ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ

Suddi Udaya

ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya
error: Content is protected !!