ಶಿಬಾಜೆ: ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ವತಿಯಿಂದ ಪೆರ್ಲ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಊರವರ ಸಹಕಾರದಿಂದ ನಡೆಯಲಿರುವ 41ನೇ ವರ್ಷದ ಭಜನೋತ್ಸವ ಪೂರ್ವಭಾವಿಯಾಗಿ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರಮದಾನ ನಡೆಯಿತು.
ಸುತ್ತಮುತ್ತಲಿನ ಹುಲ್ಲು ಗಿಡ ಗಂಟಿಗಳನ್ನು ತೆಗೆದು ಭಜನಾಂಗಣವನ್ನು ಸ್ವಚ್ಛಗೊಳಿಸಲಾಯಿತು.
ಭಜನಾ ಮಂಡಳಿಯ ಗೌರವಾಧ್ಯಕ್ಷ ಪಿ.ಟಿ. ಶೆಟ್ಟಿಗಾರ್, ಅಧ್ಯಕ್ಷ ವಿನಯಚಂದ್ರ, ಕಾರ್ಯದರ್ಶಿ ಕಿರಣ್ ಕುಮಾರ್ ಹಾಗೂ ಪದಾಧಿಕಾರಿಗಳು ಸದಸ್ಯರು ಜೊತೆಗಿದ್ದು ಸಹಕರಿಸಿದರು.