September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಕನ್ಯಾಡಿ ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

ಕನ್ಯಾಡಿ: ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯ ದಶಕ ಸಂಭ್ರಮ ಪ್ರಯುಕ್ತ ಮನೆ ಮನೆ ತಾಳಮದ್ದಳೆ ಚಾವಡಿ ಕೂಟದ ಪ್ರಥಮ ಕಾರ್ಯಕ್ರಮವು ಪುಂಜಾಲಕಟ್ಟೆ ಕುರಿಯಾಡಿಯ ಕೆ. ರಾಜಾರಾಮ್ ಶೆಟ್ಟಿಯವರ ಮನೆಯಲ್ಲಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ ಮಡಂತ್ಯಾರು ಇದರ ಸಹಕಾರದೊಂದಿಗೆ ಡಿ.೨೪ರಂದು ನಡೆಯಿತು.

ಆಯೋಜಕ ರಾಜಾರಾಮ್ ಶೆಟ್ಟಿಯವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮನೆಯವರು ಬಂಧು ಮಿತ್ರರು ಉಪಸ್ಥಿತರಿದ್ದರು.

ಪ್ರಸ್ತುತಿಯಾದ ವಾಲಿ ಮೋಕ್ಷ ಪ್ರಸಂಗದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ, ಬಾಲಕೃಷ್ಣ ಭಟ್ ಬಳ್ಳಮಂಜ, ಕಿಶೋರ್ ಶೆಟ್ಟಿ ಮುಡಾಯೂರು, ಚೆಂಡೆ ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವಿಶ್ವನಾಥ ಆಚಾರ್ಯ ವಾಮದಪದವವು, ದೇವೀಪ್ರಸಾದ್ ಆಚಾರ್ಯ ಮಡಂತ್ಯಾರು, ಯೋಗೀಶ ಆಚಾರ್ಯ ಪಣಕಜೆ, ಕಾರ್ತಿಕ್ ಭಟ್, ಚಕ್ರತಾಳದಲ್ಲಿ ಕೇಶವ ಮಡಂತ್ಯಾರು ಸಹಕರಿಸಿದರು.

ಮುಮ್ಮೇಳದಲ್ಲಿ ಹನುಮಂತನಾಗಿ ಕಿಶೋರ್ ಗೌಡ ಬಸವನಗುಡಿ, ಸುಗ್ರೀವನಾಗಿ ಪ್ರಭಾಕರ ಪಿ.ಎಮ್, ಶ್ರೀರಾಮನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ವಾಲಿಯಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ತಾರೆಯಾಗಿ ಹರ್ಷನಾರಾಯಣ ಶೆಟ್ಟಿ ನೆತ್ತರ ಪಾತ್ರ ನಿರ್ವಹಿಸಿದರು.

ತಾಳಮದ್ದಳೆ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜಾರಾಮ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಯರಾಮ್ ಶೆಟ್ಟಿ, ಲಕ್ಷ್ಮಣ್‌ದಾಸ್ ಕಾರ್ಯಕ್ರಮ ವ್ಯವಸ್ಥಾಪಕರಾಗಿ ಸಹಕಾರ ನೀಡಿದರು.

Related posts

ನಿಡ್ಲೆ ಸ.ಪ್ರೌ. ಶಾಲೆಯಲ್ಲಿ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆ

Suddi Udaya

ಜಸ್ಟ್ ರೈಡ್ ನೋಡುತ್ತೇನೆಂದು ಬೈಕ್ ತೆಗೆದುಕೊಂಡಾತ ವಾಪಸ್ ಬರಲೇ ಇಲ್ಲ: ಇತ್ತೆ ಬರುವೆ ಎಂದು ಹೇಳಿ ಹೋದಾತನೂ ಇಲ್ಲ…ಬೈಕೂ ಇಲ್ಲ…:ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯರಿಂದ ಮೂಡಬಿದ್ರೆ ಪೋಲೀಸರಿಗೆ ದೂರು: ಬೈಕ್ ಸಹಿತ ಇಶಾನ್ ಶೆಟ್ಟಿ ಉಚ್ಚಿಲ್ ಪೊಲೀಸರ ವಶ

Suddi Udaya

ಲಾಯಿಲ: “ಶರಣು ಶರಣು ಶ್ರೀ ಗುರುರಾಘವೇಂದ್ರ” ಭಕ್ತಿಗೀತೆ ಬಿಡುಗಡೆ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ‘ಸಿಗ್ಮಾ’ ಅಸೋಸಿಯೇಷನ್ ಉದ್ಘಾಟನೆ

Suddi Udaya

ಪಡಂಗಡಿ ಗ್ರಾ.ಪಂ. ಅಧ್ಯಕ್ಷರಾಗಿ ಪ್ರಶಾಂತ್ ಸುವರ್ಣ, ಉಪಾಧ್ಯಕ್ಷರಾಗಿ ಪಿ.ಎನ್ ವಸಂತಿ ಅವಿರೋಧ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!