ಉಜಿರೆ: ಎಸ್.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಕಲಿಕಾ ಫಲಿತಾಂಶ ಮತ್ತು ವಿಧಾನಗಳು” ಎಂಬ ಕಾರ್ಯಗಾರವನ್ನು ಉಜಿರೆ ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ನಂದಳಿಕೆಯ ಶ್ರೀ ಲಕ್ಮಿಜನಾರ್ಧನ ಇಂಟರ್ನಾಷನಲ್ ಶಾಲೆಯ ಪ್ರಾಂಶುಪಾಲ ಭುಜಂಗ ಪಿ ಶೆಟ್ಟಿ ಹಾಗೂ ಮಂಗಳೂರಿನ ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆಪ್ತ ಸಲಹೆಗಾರರಾದ ಡಾ.ಶ್ವೇತಾ ಕಾಮತ್ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡರು.
ಕಾರ್ಯಾಗಾರದ ಅಧ್ಯಕ್ಷತೆ ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯಕ್ ಕೆ.ಜಿ ವಹಿಸಿದ್ದರು.
ಶಿಕ್ಷಕಿ ಕಲ್ಯಾಣಿ ಎಮ್ ರಾವ್ ಕಾರ್ಯಕ್ರಮ ನಿರೂಪಿಸಿದರು.