23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿ

ಸುದ್ದಿ ಉದಯ ಪತ್ರಿಕಾ ವಿತರಕ ಯಕ್ಷಗಾನ ಕಲಾವಿದ ನಾರಾಯಣ ಕನಡ ದಂಪತಿಯ ವೈವಾಹಿಕ ಸುವರ್ಣ ಸಂಭ್ರಮ ಆಚರಣೆ

ವೇಣೂರು: ವೇಣೂರಿನಲ್ಲಿ ಸುದ್ದಿ ಉದಯ ಮತ್ತು ಇತರ ಪತ್ರಿಕೆಗಳ ವಿತರಕರಾಗಿರುವ, ಯಕ್ಷಗಾನ ಕಲಾವಿದರೂ, ವ್ಯಾಪಾರಿಗಳು ಆಗಿ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾರಾಯಣ ಕನಡ ಮತ್ತು ವಾರಿಜ ದಂಪತಿಯ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಂಭ್ರಮ ಡಿ. 29 ರಂದು ವೇಣೂರು ಬಾಹುಬಲಿ ಸಭಾಂಗಣದಲ್ಲಿ ನಡೆಯಿತು.
ಕಾಯ೯ಕ್ರಮವನ್ನು ದೀಪ ಬೆಳಗಿಸಿ ಹಾಗೂ ಪರಸ್ಪರ ಹಾರ ವಿನಿಮಯ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನದ ಸುವರ್ಣ ಸಂಭ್ರಮ ಆಚರಣೆ ನಡೆಯುತು.

ಉಜಿರೆ ಎಸ್‌. ಡಿ. ಎಂ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ಸುಬ್ರಹ್ಮಣ್ಯ ಭಟ್ ಕಜೆ, ಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಅಂಡಿಂಜೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಮೋಹನ ಅಂಡಿಂಜೆ, ವೇಣೂರು ಪಲ್ಗುಣಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಜಯರಾಜ್

ವಿ . ಎಸ್. ಅವರು ನಾರಾಯಣ ಕನಡ ಅವರು ಸಾಧನೆಗಳು ಹಾಗೂ ಅವರ ಸಾಮಾಜಿಕ ಸೇವಾ ಚಟುವಟಿಕೆಗಳ ಬಗ್ಗೆ ಮಾತನಾಡಿ ,ಶುಭ ಹಾರೈಸಿದರು. ವೇಣೂರು ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್. ಮಹಮ್ಮದ್ ಅನಿಸಿಕೆ ವ್ಯಕ್ತಪಡಿಸಿ, ತಾನು ಪತ್ರಕರ್ತನಾಗಲು ನಾರಾಯಣ ಕನಡ ಅವರೇ ಪ್ರೇರಣೆ ಎಂದು ತಿಳಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಗಣ್ಯರು,ಜನಪ್ರತಿನಿದಿನಗಳು, ವರ್ತಕರು, ಕುಟುಂಬಸ್ಥರು, ಅಭಿಮಾನಿಗಳು ಹಾಜರಿದ್ದು ಶುಭ ಕೋರಿದರು.

ನಾರಾಯಣ ಕನಡ ಅವರ ಪುತ್ರರಾದ ಸತೀಶ್ ಕೆ., ರಮೇಶ್ ಕೆ. ಎನ್., ಮಲ್ಲಿಕಾ, ಅಳಿಯ ವಸಂತ ಕುಮಾ‌ರ್, ಸೊಸೆಯಂದಿರಾದ ಪ್ರಮೀಳಾ, ಶರ್ಮಿಳಾ, ಬಂಧು ಮಿತ್ರರು ಸಹಕರಿಸಿದರು. ಕಾರ್ಯಕ್ರಮದ ಮೊದಲು ಕಲ್ಲಡ್ಕ ವಿಠಲ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಅವರ ಮೊಮ್ಮಕ್ಕಳು ಪ್ರಾರ್ಥಿಸಿದರು. ಹಿರಿಯ ಪುತ್ರ ಸತೀಶ್ ಕೆ. ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ನಿರೂಪಿಸಿದರು.

Related posts

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಕುಸಿದು ಬಿದ್ದು ವ್ಯಕ್ತಿ ಸಾವು

Suddi Udaya

ಅಳದಂಗಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಾವೂರು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ

Suddi Udaya

ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ

Suddi Udaya

ಜೂ.18: ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ದ್ವೇಷ ರಾಜಕೀಯವನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ

Suddi Udaya
error: Content is protected !!