23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ: 25 ವರ್ಷಗಳ ಹಿಂದೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾವೇಶ

ಉಜಿರೆ: 1996-1999ರ ಅವಧಿಯಲ್ಲಿ ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆ ಮತ್ತು ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿದ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದ ಸಮಾವೇಶ ಹಾಗೂ ‘ಗುರುವಂದನ’ ಕಾರ್ಯಕ್ರಮ ಡಿ.28ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು.

ಶಾಲಾ ಮುಖ್ಯಶಿಕ್ಷಕ ಸುರೇಶ್ ಕೆ. ಸಮಾರಂಭವನ್ನು ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿಗಳಾದ ಮಂಜ ನಾಯ್ಕ,

ಅಂತರರಾಷ್ಟ್ರೀಯ ಚಿತ್ರಕಲಾವಿದ ಉಜಿರೆಯ ವಿಲಾಸ್ ಆರ್. ನಾಯಕ್, ಪವಿತ್ರ ಶೆಣೈ ವಿದ್ಯಾರ್ಥಿಗಳಾಗಿದ್ದ ಸಂದರ್ಭದ ಜೀವನದ ಕುರಿತು ಮಾತನಾಡಿದರು.

ಹಿರಿಯ ಶಿಕ್ಷಕ ಶಂಕರ ನಾರಾಯಣ ರಾವ್, ಬಿ. ಜನಾರ್ದನ ತೋಳ್ಪಾಡಿತ್ತಾಯ , ಮೋಹನ ಎಸ್.ಜೈನ್, ಸದಾಶಿವ ಪೂಜಾರಿ, ಕಲಾವತಿ ಸಿ.ಎಚ್., ಆರ್.ಎನ್. ಪೂವಣಿ, ಎನ್. ಪದ್ಮರಾಜು, ರಮೇಶ ಮಯ್ಯ, ವಿ.ಕೆ. ವಿಟ್ಲ, ಕೃಷ್ಣ ಶೆಟ್ಟಿ ಮಾತನಾಡಿದರು.
ಶಿಕ್ಷಕರಿಗೆ ಗುರುನಮನ ಸಲ್ಲಿಸಲಾಯಿತು. ವಿಲಾಸ್ ಆರ್. ನಾಯಕ್ ಅವರನ್ನು ಗೌರವಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕರು ಅಂದು ಮಕ್ಕಳನ್ನು ಶಿಕ್ಷಿಸಿ, ತಿದ್ದಿ, ತೀಡಿ, ಜೀವನದಲ್ಲಿ ಉತ್ತಮವಾದ ವ್ಯಕ್ತಿಯನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿದ್ದು ನಮ್ಮಿಂದಾದ ಸಣ್ಣ ಪುಟ್ಟ ನೋವುಗಳನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ಈ ಅದ್ಭುತ ಕ್ಷಣವನ್ನು ಸೃಷ್ಟಿಸಿದ್ದೀರಿ. ಒಂದೇ ವೇದಿಕೆಯಲ್ಲಿ ದಶಕಗಳ ನಂತರ ಎಲ್ಲಾ ನಿವೃತ್ತ ಅಧ್ಯಾಪಕರುಗಳನ್ನು ಒಗ್ಗೂಡಿಸಿರುವುದು ಅವಿಸ್ಮರಣೀಯವಾಗಿದೆ. ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನಕ್ಕೆ ಸೀಮಿತವಾಗದೆ, ಶಿಕ್ಷಕ ವೃಂದದವರ ಸಮ್ಮೀಲನವಾಗಿದೆ. ಜೀವನ ಮೌಲ್ಯಗಳನ್ನು ತರಗತಿಯ ಕೊಣೆಗಳಲ್ಲಿ ಭೋದಿಸಬೇಕಾದ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದ್ದು, ಕಾರ್ಯಕ್ರಮದ ಉದ್ದೇಶ, ಚಿಂತನೆ, ಒಗ್ಗೂಡುವಿಕೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಹರಸಿ ಹಾರೈಸಿದರು.

ವಿಲಾಸ್ ಆರ್. ನಾಯಕ್ ರವರು ತಮ್ಮ ಪ್ರೌಢಶಿಕ್ಷಣದ ಹಂತದಲ್ಲಿ ತಾನು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದು ಗುರುವೃಂದದವರ ಬೆಂಬಲದಿಂದ ಹಂತಹಂತವಾಗಿ ಬೆಳೆದು ಬಂದ ವಿಚಾರಗಳನ್ನು ಮೆಲುಕುಹಾಕಿದರು.

ಡಾ. ವಿಶ್ವಮೋಹನ್ ಕೆ.ಎನ್, ಡಾ. ವೆಂಕಟೇಶ್ ಕೆ.ಟಿ. ಮತ್ತು ಶ್ರೀಮತಿ ಸೌಮ್ಯ ಕುಮಾರಿ ಇವರು ಶಿಕ್ಷಕರ ಜೀವನಚರಿತ್ರೆಯ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು.

ಶ್ರೀಮತಿ ಪುನೀತಾ ಪ್ರಭಾಕರ್ ಸ್ವಾಗತಿಸಿದರು. ಶ್ರೀಮತಿ ಶ್ವೇತಾ ಪೈ ವಂದಿಸಿದರು. ಶ್ರೀಮತಿ ಗಾಯತ್ರಿ ಪಿ. ಕಾರ್ಯಕ್ರಮ ನಿರೂಪಿಸಿದರು.
ವರದಿ: ಶ್ರೀಮತಿ ಸೌಮ್ಯ ಕುಮಾರಿ.

Related posts

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ಕುಕ್ಕೇಡಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ಗೆ ಹೆಚ್ಚುವರಿ ರೂ.50 ಲಕ್ಷ ಅನುದಾನ ಮಂಜೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ; ಮಚ್ಚಿನ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹ ದಫನ ಮಾಡಿದ ವ್ಯಕ್ತಿ ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಉಜಿರೆ ಅನುಗ್ರಹ ವಿದ್ಯಾ ಸಂಸ್ಥೆಯಲ್ಲಿ ಪಾಲಕರ ಹಬ್ಬದ ಆಚರಣೆ

Suddi Udaya

ಕೊಕ್ಕಡ ಪರಿಸರದಲ್ಲಿ ಭೀಕರ ಬಿರುಗಾಳಿ ಮಳೆ: ಮರ ಉರುಳಿ ಬಿದ್ದರೂ ಹಾನಿಯಾಗದ ದೈವದ ಗುಡಿ: ದೈವಗಳ ಕಾನಿ೯ಕ ಭಕ್ತರ‌ ಅನಿಸಿಕೆ

Suddi Udaya
error: Content is protected !!