January 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿ ಸಭೆ

ಬೆಳ್ತಂಗಡಿ: ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿಯ ಮೊದಲನೇ ಸಭೆಯನ್ನು ಡಿ.೨೯ರಂದು ಕೊಡ್ಯೇಲು ಸಂಜೀವ ಶೆಟ್ಟಿಯವರ ಹಾಲ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ನೋಣಯ್ಯ ಶೆಟ್ಟಿ ಕೊಡ್ಯೇಲು ವಹಿಸಿದ್ದರು.

ಸಭೆಯಲ್ಲಿ ವಲಯ ಬಂಟರ ಸಂಘದ ಸಂಚಾಲಕ ರಮೇಶ್ ಶೆಟ್ಟಿ ಪೆರಿಂಜೆ, ವೇಣೂರು ವಲಯ ಬಂಟರ ಸಂಘದ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಕುಂಡಾಜೆ ಉಪಸ್ಥಿತರಿದ್ದರು.

ಮುಂದಿನ 2 ವರ್ಷದ ಅವಧಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಯಿತು. ಗ್ರಾಮದ ವಿವಿಧ ಗ್ರಾಮಗಳಿಗೆ ಜವಾಬ್ದಾರಿ ಸದಸ್ಯರುಗಳ ನೇಮಕವನ್ನು ಮಾಡಲಾಯಿತು.
ಅಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ, ಕಾರ್ಯದರ್ಶಿಯಾಗಿ ಶಿವರಾಜ್ ಶೆಟ್ಟಿ ಅಜ್ಜಾಡಿ, ಜೊತೆ ಕಾರ್ಯದರ್ಶಿಯಾಘಿ ಶಶಿಧರ ಶೆಟ್ಟಿ ಹಕ್ಕೇರಿ, ಕೋಶಾಧಿಕಾರಿಯಾಗಿ ಸತೀಶ್ ಶೆಟ್ಟಿ ಕುಂಜಾಡಿ, ಉಪಾಧ್ಯಕ್ಷರುಗಳಾಗಿ ವಿಶ್ವನಾಥ ಶೆಟ್ಟಿ ಐತ್ತೇರಿ, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ಶ್ರೀಮತಿ ಯಶೋಧ ಚಂದ್ರಶೇಖರ ಶೆಟ್ಟಿ ಪೂವಳ, ಗೌರವ ಸಲಹೆಗಾರರಾಗಿ ನೋಣಯ್ಯ ಶೆಟ್ಟಿ ಕೊಡ್ಯೇಲು, ರಮೇಶ್ ಎಂ. ಶೆಟ್ಟಿ ಉಗ್ರೋಡಿ, ಸಂದೀಪ್ ಶೆಟ್ಟಿ ಉಮನೊಟ್ಟು, ಜವಾಬ್ದಾರಿಯುತ ಸದಸ್ಯರುಗಳಾಗಿ ಕುಂಜಾಡಿ: ಹರೀಶ್ ಜೆ. ಶೆಟ್ಟಿ ಕುಂಜಾಡಿ, ಪೂಂಜ: ಸದಾಶಿವ ಶೆಟ್ಟಿ ಅಸನಬೆಟ್ಟು, ರವಿಪ್ರಸಾದ್ ಶೆಟ್ಟಿ, ಪಿಲಿಕಜೆ: ಶರತ್ ಶೆಟ್ಟಿ, ಧೀರಾಜ್ ಶೆಟ್ಟಿ, ಆರ್ಥಿಕ್ ಶೆಟ್ಟಿ, ಪಾಲ್ಯ: ಉಮೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಹಕ್ಕೇರಿ: ಸಚಿನ್ ಕೆ. ಶೆಟ್ಟಿ, ಶ್ರೀನಿಧಿ ಶೆಟ್ಟಿ, ಒಳಬೈಲು: ಬಾಲಕೃಷ್ಣ ಶೆಟ್ಟಿ, ವಿಜಯ ಶೆಟ್ಟಿ ಬರಾಯಿ, ಪೂವಳ: ಸಂದೀಪ್ ಶೆಟ್ಟಿ ಕುಂಡಾಜೆ, ಚಂದ್ರಶೇಖರ ಶೆಟ್ಟಿ, ಹೆನ್ನಿಮಾರ್: ಸುಜಿತ್ ಶೆಟ್ಟಿ, ರತನ್ ಶೆಟ್ಟಿ ಉಗ್ರೋಡಿ: ಪುಷ್ಪರಾಜ್ ಶೆಟ್ಟಿ ಇವರುಗಳು ಆಯ್ಕೆಯಾದರು.

Related posts

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದ್ರವಸಾರಜನಕ ಜಾಡಿಗಳ ವಿತರಣೆ

Suddi Udaya

ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ತೆನೆ ಹಬ್ಬ

Suddi Udaya

ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರಕ್ಕೆ ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭೇಟಿ

Suddi Udaya

ಕಣಿಯೂರು: ಯುವಕೇಸರಿ ತಂಡದ ವತಿಯಿಂದ ಧನಸಹಾಯ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಕಾಶಿಪಟ್ಣ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!