September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಮದ್ದಡ್ಕ: ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಮದ್ದಡ್ಕ ಸುವರ್ಣ ಸೌಧ ಸಭಾಭವನದಲ್ಲಿ ಸೆ.19ರಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ರೂ. 3.90ಕೋಟಿ ವ್ಯವಹಾರಗಳ ಗಳಿಸಿದ್ದು ರೂ. 15.30ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಶೇ.65 ಬೋನಸ್, ಶೇ.25 ಡಿವಿಡೆಂಡ್ ಘೋಷಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಅಣಿ ಶೆಟ್ಟಿ, ಕೆ.ಪಿ. ಚಿದಾನಂದ, ವಿನೋದ ಶೆಟ್ಟಿ, ಮೋಹನ್ ನಾಯ್ಕ, ಶಿವಪ್ಪ ಗೌಡ, ಶಶಿಕಲಾ, ಕಾಂತಪ್ಪ ಮೂಲ್ಯ, ರುದೇಶ್ ಕುಮಾರ್, ನಾರಾಯಣ ಮೂಲ್ಯ, ವಸಂತಿ, ಉಪಸ್ಥಿರಿದ್ದರು.

ಸಂಘದ ಸದಸ್ಯರ ಮಕ್ಕಳಾದ 8 ಮಂದಿ ಎಸ್‌ಎಸ್‌ಎಲ್‌ಸಿ ಹಾಗೂ 11 ಮಂದಿ ಪಿ.ಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಉಪಾಧ್ಯಕ್ಷ ವಿವೇಕಾನಂದ ಸಾಲಿಯನ್ ಸ್ವಾಗತಿಸಿ, ಕಾರ್ಯದರ್ಶಿ ಪವಿತ್ರ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ, ನಿರ್ದೇಶಕ ರಮೇಶ್ ಪೂಜಾರಿ ಧನ್ಯವಾದವಿತ್ತರು.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಬಳಿ ಇರುವ ಕಾಣಿಕೆ ಡಬ್ಬಿ ಒಡೆದು ಹಣ ಕಳವು

Suddi Udaya

ಶಕ್ತಿ ಯೋಜನೆಯ ಯಶಸ್ವಿಗಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ

Suddi Udaya

ಉಜಿರೆ ಶಾರದಾ ಮಂಟಪದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ: ಇವಿಎಂ ಮಾದರಿ ಆ್ಯಪ್ ಬಳಸಿ ಮತ ಚಲಾವಣೆ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ : ಉಜಿರೆ ಎಸ್ ಡಿ ಎಂ ಅನುದಾನಿತ ಸೆಕೆಂಡರಿ ಶಾಲೆ ಶೇ.99.34 ಫಲಿತಾಂಶ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ನಾರಾವಿ ಮಹಾಶಕ್ತಿಕೇಂದ್ರದ ಸಭೆ

Suddi Udaya
error: Content is protected !!