ಉಜಿರೆ ಲಲಿತನಗರದ ಸುದರ್ಶನ ಮನೆಯಲ್ಲಿ ಡಿ.೨೯ರಂದು ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯ ವತಿಯಿಂದ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೋಭಾ ಸುರೇಶ ಕುದ್ರೆಂತ್ತಾಯರಿಗೆ ಗೌರವಾರ್ಪಣೆ ನಡೆಯಿತು.
ಸಂಸ್ಥೆಯ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಗುರುವಾಯನಕೆರೆ ಟ್ರಸ್ಟಿ ಶಿತಿಕಂಠ ಭಟ್ ಉಜಿರೆ, ಸಂಚಾಲಕ ಮಹೇಶ ಕನ್ಯಾಡಿ ಉಪಸ್ಥಿತರಿದ್ದರು.
ಯಕ್ಷಭಾರತಿ ಸಂಸ್ಥೆಯ ಆಹ್ವಾನಿತ ಸದಸ್ಯ ಮುರಳಿಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಶೋಭಾ ಸುರೇಶ ಕುದ್ರೆಂತ್ತಾಯರನ್ನು ಅಭಿನಂದಿಸಿ ಮಾತನಾಡಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿರು. ರಾಮಕೃಷ್ಣ ಭಟ್ ಬಳೆಂಜ ಗೌರವ ಪತ್ರ ವಾಚಿಸಿದರು. ಕಾರ್ಯಕ್ರಮದ ಆಯೋಜಕ ನೀಲಕಂಠ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಬಳಿಕ ಖ್ಯಾತ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಪ್ರಸಂಗ ಶರಸೇತು ಬಂಧನ ಪ್ರಸ್ತುತಿಯಾಯಿತು. ನೀಲಕಂಠ ಭಟ್ ಮತ್ತು ಮನೆಯವರು ಪ್ರಾಯೋಜಿಸಿದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ ಚೆಂಡೆ ಮದ್ದಳೆ ಯಲ್ಲಿ ಶಿತಿಕಂಠ ಭಟ್ ಉಜಿರೆ ಮತ್ತು ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಜುನನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಹನುಮಂತನಾಗಿ ವಾಸುದೇವ ರಂಗ ಭಟ್ ಮಧೂರು ಕೃಷ್ಣನಾಗಿ ಸುರೇಶ ಕುದ್ರಂತಾಯ ಉಜಿರೆ ಪಾತ್ರ ನಿರ್ವಹಿಸಿದರು.