ಉಪ್ಪಿನಂಗಡಿ: ಕೆಲವು ದಿನಗಳಿಂದ ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯೊಂದು ಬೀಬಿ ಮಜಲು ಕಾಡಿನಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.
ಬಟ್ಲಡ್ಕ ಪರಿಸರದಲ್ಲಿ ಹಲವು ತೋಟಗಳಿಗೆ ನುಗ್ಗಿ ಬಾಳೆ ಕೃಷಿಯನ್ನು ಹಾನಿಗೆಡವಿದೆ.
ಈ ಮಧ್ಯೆ ಕಾಡಾನೆಯನ್ನು ಕಾಡಿನ ಪರಿಧಿಯಲ್ಲೇ ಸಂಚರಿಸುವಂತೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಯ ಮೇಲೆ ಕಣ್ಗಾವಲು ಇರಿಸಿದ್ದಾರೆ.