April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆಯ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಗ್ನಿ ಅವಘಡ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ

ಉಜಿರೆಯ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಗ್ನಿ ಅವಘಡ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಜ. 3ರಂದು ನಡೆಯಿತು.

ಬೆಳ್ತಂಗಡಿಯ ಅಗ್ನಿಶಾಮಕ ಠಾಣೆ ಹಾಗೂ ಎಸ್.ಡಿ.ಎಂ. ಬಿ.ಎಡ್. ಕಾಲೇಜು ಜಂಟಿ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮವನ್ನು ಅಗ್ನಿಶಾಮಕ ದಳದ ಠಾಣಾಧಿಕಾರಿ ನೀಲಯ್ಯ ಗೌಡ ಉದ್ಘಾಟಿಸಿದರು.

ಠಾಣೆಯ ಕಛೇರಿ ಅಧಿಕಾರಿ ಉಸ್ಮಾನ್ ಅವರು ಮಾತನಾಡಿ, ವಿವಿಧ ರೀತಿಯ ಅಗ್ನಿ ಅವಘಡಗಳ ಬಗ್ಗೆ ತಿಳಿಸಿದರು. ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪದಿಂದ ಆಗುವ ಅವಘಡ ಕುರಿತು ವಿವಿಧ ಘಟನೆಗಳ ಕುರಿತು ವಿವರಿಸಿದರು.

ಬಾತ್ ರೂಂಗಳಲ್ಲಿ ಗ್ಯಾಸ್ ಗೀಸರ್ ನಿಂದ ಉಂಟಾಗುವ ‘ಸ್ವೀಟ್ ಡೆತ್’ ಬಗ್ಗೆ ವಿವರಿಸಿದರು. ನೀರು ಬಿಸಿಯಾಗುವ ಪ್ರಕ್ರಿಯೆಯಲ್ಲಿ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ನಿಧಾನವಾಗಿ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಸಾವಿಗೆ ಕಾರಣವಾಗುವ ಬಗ್ಗೆ ತಿಳಿಸಿದರಲ್ಲದೆ, ಗೀಸರ್, ಗ್ಯಾಸ್ ಸಿಲಿಂಡರ್ ಗಳನ್ನು ಸ್ನಾನದ ಕೊಠಡಿಯ ಹೊರಗೆ ಅಥವಾ ಮನೆಯ ಹೊರಗೆ ಅಳವಡಿಸುವಂತೆ ಸಲಹೆ ನೀಡಿದರು.

ಮನೆಯ ಹೊರಗಡೆ ಕಸದ ರಾಶಿಗಳಿಗೆ ಬೆಂಕಿ ಕೊಟ್ಟಾಗ, ವಿದ್ಯುತ್ ಅವಘಡ ಸಂಭವಿಸಿದಾಗ, ಬಾವಿಗೆ ಇಳಿಯುವಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸಿದರು. ಅಗ್ನಿ ಅವಘಡ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.ಅಗ್ನಿಶಾಮಕ ದಳದ ಇತರ ಸಿಬ್ಬಂದಿ ಹಾಗೂ ಕಾಲೇಜಿನ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.

ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಸಂತೋಷ ಸಲ್ದಾನ ವಂದಿಸಿದರು.

Related posts

ಅಳದಂಗಡಿ ಸತ್ಯದೇವತೆ ದೈವಸ್ಥಾನದ ಕಾರ್ಣಿಕ: ಕಳೆದುಹೋದ ಚಿನ್ನದ ಬ್ರಾಸ್ ಲೆಟ್ ಪತ್ತೆ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಹಣ ತೆಗೆಯಲು ಅಪರಿಚಿತನಿಗೆ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿದ ಅಪರಿಚಿತ ಖಾತೆಯಿಂದ 1 ಲಕ್ಷಕ್ಕೂ ಅಧಿಕ ರೂ. ತೆಗೆದು ವಂಚನೆ

Suddi Udaya

ಮರೋಡಿ ಪಲಾರಗೋಳಿ ಆದಿಶಕ್ತಿ ಸೇವಾ ಸಮಿತಿಯಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ರಾಜ್ಯಮಟ್ಟದ ಕರಾಟೆ: ಕಾಯರ್ತಡ್ಕ ದಿವ್ಯಜ್ಯೋತಿ ಆಂ.ಮಾ. ಶಾಲೆಯ ಅಡ್ಲಿನ್ ಎಲಿಜಬೆತ್ ಜೆರಿನ್ ಗೆ ಚಿನ್ನದ ಪದಕ

Suddi Udaya

ಅಳದಂಗಡಿಯಲ್ಲಿ ಸಂಭ್ರಮದ ಪಟ್ಟದ ಕಂಬಳ

Suddi Udaya
error: Content is protected !!