28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರದಲ್ಲಿ ವಿಶಿಷ್ಟ ಆರೋಗ್ಯ ಶಿಬಿರ “ವೈದ್ಯರ ನಡೆ ಕಾಡಿನ ಕಡೆ”

ಕಡಿರುದ್ಯಾವರ: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕ, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಕಾರ್ಯದರ್ಶಿ ಡಾ| ಅವಿನ್ ಆಳ್ವ ಹಾಗೂ ತಂಡದಿಂದ ಬುಡಕಟ್ಟು ಜನಾಂಗದವರಿಗಾಗಿ, ವಿಶಿಷ್ಟ ಆರೋಗ್ಯ ಶಿಬಿರವನ್ನು ವೈದ್ಯರ ನಡೆ ಕಾಡಿನ ಕಡೆ, ಎಂಬ ಆರೋಗ್ಯ ಶಿಬಿರವನ್ನು, ಶ್ರೀವಿದ್ಯಾ ಸರಸ್ವತಿ ಮಹಿಳಾ ಮಂಡಲ ಕಡಿರುದ್ಯಾವರದಲ್ಲಿ ನಡೆಸಲಾಯಿತು.

ಸ್ಥಳೀಯ ಮಲೆಕುಡಿಯ ಜನಾಂಗದ ಮುಖ್ಯಸ್ಥ ಐತಪ್ಪ ಮಲೆಕುಡಿಯ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಡಾ| ಅವಿನ್ ಆಳ್ವರವರು ಮಾತನಾಡುತ್ತಾ ಕಟ್ಟ ಕಡೆಯ ಜನಾಂಗಕ್ಕೆ ವೈದ್ಯಕೀಯ ಸೇವೆ ದೊರೆತರೆ ವೈದ್ಯಕೀಯ ಸೇವೆಗೆ ಸಾರ್ಥಕತೆ ದೊರಕುವುದಲ್ಲದೆ, ವೈದ್ಯರಿಗೂ ಕೂಡ ಮಾನಸಿಕ ನೆಮ್ಮದಿ ಶಾಂತಿ ಸಿಗುತ್ತದೆ ಎ೦ದರು.

ಮುಖ್ಯ ಅತಿಥಿಗಾಗಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ತಾಲೂಕು ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯ ಕೆ. ನೇಮಿರಾಜ್ ರವರು ಭಾಗವಹಿಸಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆಯಾದ ಲೋಕೇಶ್ವರಿ ವಿನಯಚಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು, ಸಂಧ್ಯಾ ಹೆಬ್ಬಾರ್ ಸಿರಿಬೈಲು ಪ್ರಾರ್ಥಿಸಿ, ಭಾರತಿ ಉದ್ಧಾರ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಶಿಬಿರದಲ್ಲಿ ಸುಮಾರು 45 ಮಂದಿ ಭಾಗವಹಿಸಿದ್ದರು.

Related posts

ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಭೇಟಿ

Suddi Udaya

ಬೆಳ್ತಂಗಡಿ ಅಲ್ಪಸಂಖ್ಯಾತ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಸಚಿವ ಬಿ ಜೆಡ್ ಜಮೀರ್ ಅಹಮ್ಮದ್ ಖಾನ್ ರವರಿಗೆ ರಕ್ಷಿತ್ ಶಿವಾರಾಂ ರಿಂದ ಮನವಿ

Suddi Udaya

ಕೊಕ್ಕಡದ‌ಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರವರ ಕಾರನ್ನು ಚುನಾವಣಾ ಅಧಿಕಾರಿಗಳಿಂದ ತಪಾಸಣೆ

Suddi Udaya

ಕೆ-ಸೆಟ್ ಪರೀಕ್ಷೆ: ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ವಿದ್ಯಾರ್ಥಿನಿ ಅರ್ಚನಾ ರಾಜ್ಯಕ್ಕೆ ಮೂರನೇ ರ‍್ಯಾಂಕ್‌

Suddi Udaya

ಬೆಳ್ತಂಗಡಿ: ಹುಟ್ಟೂರಲ್ಲಿ ಬಂಗೇರರ ವೃತ್ತ ಮತ್ತು ಪುತ್ಥಳಿ ನಿರ್ಮಾಣ: ಜಯವಿಕ್ರಮ್ ಕಲ್ಲಾಪು

Suddi Udaya

ಗುರುವಾಯನಕೆರೆ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಉಮಾ ಡಿ. ಗೌಡ ಹಟ್ಟತ್ತೋಡಿ ಸೇವಾ ನಿವೃತ್ತಿ

Suddi Udaya
error: Content is protected !!