23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿ: ಶ್ರೀ ನೇಮಿನಾಥಸ್ವಾಮಿ ಸಭಾಭವನ ಉದ್ಘಾಟನೆ

ಸುಲ್ಕೇರಿ:  ಯುವಜನತೆ ಸಮಾಜದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದು,  ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಪರಿಶುದ್ಧ ಆಚಾರವಂತರು ಆಗಬೇಕು ಎಂದು  ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.


ಅವರು ಜ.4 ರಂದು ಸುಲ್ಕೇರಿಯಲ್ಲಿ ಭಗವಾನ್ ಶ್ರೀ ನೇಮನಾಥಸ್ವಾಮಿ ಬಸದಿ ವಠಾರದಲ್ಲಿ ನಿರ್ಮಿಸಲಾದ ಶ್ರೀ ನೇಮಿನಾಥಸ್ವಾಮಿ ಸಭಾಭವನವವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಯಾವುದೇ ಸತ್ಕಾರ್ಯ ನಡೆಯಬೇಕಾದರೆ ಯೋಗ ಮತ್ತು ಸಂದರ್ಭ ಒದಗಿ ಬರಬೇಕು ಕಟ್ಟಡ ನಿರ್ಮಾಣದಲ್ಲಿ ವಾಸ್ತುವಿನ ಪ್ರಭಾವ ಇರುತ್ತದೆ. ಧರ್ಮಸ್ಥಳದ ವತಿಯಿಂದ ಕಾರ್ಕಳದಲ್ಲಿರುವ ಜೈನಮಠವನ್ನು ನವೀಕರಣಗೊಳಿಸಿ ಸಮಾಜಕ್ಕೆ ಅರ್ಪಿಸಿದ ಬಳಿಕ ಕಾರ್ಕಳ  ಸೀಮೆಯ ಅನೇಕ ಪ್ರಾಚೀನ ಬಸದಿಗಳು ಜೀರ್ಣೋದ್ಧಾರಗೊಂಡು ಪಂಚಕಲ್ಯಾಣ ಸಹಿತ ಪ್ರತಿಷ್ಠಾ ಮಹೋತ್ಸವಗಳು  ನಡೆಯುತ್ತಿರುವುದು ಶುಭದಾಯಕವಾಗಿದೆ.  ದಾನ – ಧರ್ಮಾದಿ ಸತ್ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು  ಸ್ತುತ್ಯಾರ್ಹವಾಗಿದೆ ಎಂದರು.  
ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ  ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ  ಧರ್ಮದ ಮರ್ಮವನ್ನರಿತು  ಆಚರಣೆ ಮಾಡಿದಾಗ ಪಾಪಕರ್ಮಗಳ ಕ್ಷಯವಾಗಿ ಅಕ್ಷಯಸುಖವನ್ನೀಯುವ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ.  ನಿತ್ಯವೂ ಮಂದಿರಗಳಿಗೆ ಹೋಗಿ ದೇವರದರ್ಶನ, ಜಪ, ತಪ, ಧ್ಯಾನ ಮಾಡಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.


ವಿಧಾನಪರಿಷತ್ತಿನ ಮಾಜಿಸದಸ್ಯ ಕೆ. ಹರೀಶ್‌ಕುಮಾರ್ ಮಾತನಾಡಿ ಅಲ್ಪಸಂಖ್ಯಾತರಾದರೂ ಜೈನರ ಶಿಸ್ತು, ಶ್ರದ್ಧೆ, ಭಕ್ತಿ, ಅಹಿಂಸೆ ಹಾಗೂ ಸಮಾಜ ಸೇವಾಕಳಕಳಿಯನ್ನು ಶ್ಲಾಘಿಸಿದರು.
ಸರ್ಕಾರದಿಂದ ಈಗಾಗಲೇ ಸಭಾಭವನಕ್ಕೆ 50 ಲಕ್ಷ ರೂ.  ಮಂಜೂರಾಗಿದ್ದು ಸದ್ಯದಲ್ಲೇ ಇನ್ನೂ30 ಲಕ್ಷ ರೂ.  ಅನುದಾನ ದೊರಕಲಿದೆ ಎಂದರು.
ಕೆ. ಹರೀಶ್‌ಕುಮಾರ್ ಅವರನ್ನು ಗೌರವಿಸಲಾಯಿತು.
ಶಾಸಕ ಹರೀಶ್ ಪೂಂಜ, ತುಮಕೂರಿನ ಉದ್ಯಮಿ ಜಿ.ಎಸ್. ರಾಜೇಂದ್ರ ಕುಮಾರ್ ಮತ್ತು ಅಳದಂಗಡಿ ಅರಮನೆಯ ಶಿವಪ್ರಸಾದ್  ಅಜಿಲ ಶುಭಾಶಂಸನೆ ಮಾಡಿದರು.


ಅಧ್ಯಕ್ಷತೆ ವಹಿಸಿದ ಆಳದಂಗಡಿ ಅರಮನೆಯ  ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ  ಮಾತನಾಡಿ, ಪಂಚಕಲ್ಯಾಣ ಮತ್ತು  ಬಸದಿ ಜೀರ್ಣೋದ್ಧಾರ ಕಾರ್ಯದಲ್ಲಿ ಯುವಜನತೆಯ ಸಕ್ರಿಯ ಸಹಕಾರಕ್ಕೆ ಅಭಿನಂದಿಸಿದರು.
ಬಸದಿಯ ಆಡಳಿತ  ಮೊಕ್ತೇಸರ ಎನ್. ರವಿರಾಜ್ ಹೆಗ್ಡೆ ನಾವರಗುತ್ತು ಉಪಸ್ಥಿತರಿದ್ದರು.
ಕುಮಾರಿ ಪ್ರಾಂಜಲಿ, ಪಿಲ್ಯ ಪ್ರಾರ್ಥನೆ ಹಾಡಿದರು.
  ವಕೀಲರಾದ ಅಜಿತ್, ನಾವರಗುತ್ತು ಸ್ವಾಗತಿಸಿದರು. ಉಜಿರೆಯ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನ ಉಪನ್ಯಾಸಕ ಪ್ರೊ. ನವೀನ್‌ಕುಮಾರ್ ಜೈನ್ ಧನ್ಯವಾದವಿತ್ತರು. ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.


ಬಸದಿಯಲ್ಲಿ ಋಷಿಮಂಡಲ ಆರಾಧನೆ, ಕೂಷ್ಮಾಂಡಿ ನಿಆರಾಧನೆ,  ಪದ್ಮಾವತಿದೇವಿಗೆ  ಕುಂಕುಮಾರ್ಚನೆ, ಕ್ಷೇತ್ರಪಾಲ ಮತ್ತು ನಾಗದೇವರಿಗೆ ನವಕಲಶ ಅಭಿಷೇಕ ನಡೆಯಿತು.

Related posts

ಬೆಳಾಲು : ಅನೈತಿಕ ಸಂಬಂಧದಿಂದ ಪತ್ನಿಯನ್ನು ಬಾವಿಗೆ ತಳ್ಳಿದ ಪತಿ: ಧರ್ಮಸ್ಥಳ ಪೊಲೀಸರ ಲಾಠಿ ರುಚಿಗೆ ಸತ್ಯಾಂಶ ಬಯಲು

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಯವರಿಗೆ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ

Suddi Udaya

ಜ.24: ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಕಾರು ಪಲ್ಟಿ: ಅದೃಷ್ಟವಶಾತ್ ತಪ್ಪಿದ ಅನಾಹುತ

Suddi Udaya

ಸಿಎ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಕೇಶವ ಕಾಮತ್ ತೇರ್ಗಡೆ

Suddi Udaya
error: Content is protected !!