ಕಲ್ಲೇರಿ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನವು ಬಂದಾರು, ಮೊಗ್ರು , ಕಣಿಯೂರು, ಉರುವಾಲು, ಇಳಂತಿಲ, ತೆಕ್ಕಾರು, ಬಾರ್ಯ ಮತ್ತು ಪುತ್ತಿಲ ಗ್ರಾಮಗಳಿಗೆ ಒಳಪಟ್ಟ ನೋಂದಣಿಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳು ಹಾಗೂ ಸಮಸ್ಯೆಗಳ ಪರಿಶೀಲನೆ ಕುರಿತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರವು ಕಲ್ಲೇರಿ ಸಹಕಾರಿ ಸಂಘದ ಸಭಾಭವನದಲ್ಲಿ ಜ. 6ರಂದು ಜರಗಿತು.
ಕಾರ್ಯಕ್ರಮವನ್ನು ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ಪದ್ಮನಾಭ್ ಸಾಲ್ಯಾನ್ ಉದ್ಘಾಟಿಸಿದರು.
ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದರು.
ಬಾರ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಉಸ್ಮಾನ್, ತೆಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಯಾನತ್, ಅನುಷ್ಠಾನ ಸಮಿತಿಯ ಸದಸ್ಯರಾದ ಸೌಮ್ಯ, ಮರಿಟಾ ಪಿಂಟೋ, ನೇಮಿರಾಜ್, ವಂದನ ಭಂಡಾರಿ, ಬೆಳ್ತಂಗಡಿ ಉಪವಿಭಾಗದ ಸ.ಕಾ. ಇಂಜಿನಿಯರ್ ಕೈಮೆಂಟ್ ಬೆಂಜಮಿನ್ ಬ್ರಾಗ್ಸ್, ಸಿಡಿಪಿಒ ಪ್ರಿಯಾ ಆಗ್ನೆಸ್, ಆಹಾರ ಇಲಾಖೆ ಅಧಿಕಾರಿ ವಿಶ್ವ ಹಾಗೂ ಇತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ತೆಕ್ಕಾರು ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಕಾರ್ಯಕ್ರಮ ನಿರೂಪಿಸಿ, ತಾಲೂಕು ಪಂಚಾಯತ್ ಸಿಇಒ ಭವಾನಿ ಶಂಕರ್ ಸ್ವಾಗತಿಸಿದರು.