ಮಡಂತ್ಯಾರು: ಇಲ್ಲಿನ ನಿಯತಿ ನೃತ್ಯ ನಿಕೇತನದ ಎಂಟು ವಿದ್ಯಾರ್ಥಿಗಳು 2024 ನೇ ಸಾಲಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ಎರಡನೇ ಬ್ಯಾಚ್ ಜೂನಿಯರ್ ವಿದ್ಯಾರ್ಥಿಗಳಾದ ಧನ್ವಿತ, ಧನುಶ್ರೀ,ಮಾಧವಿ ಪ್ರಭು,ಸುಕನ್ಯಾ, ಮಧುರಾ ಜಿ ಭಟ್, ಧೃತಿ ಎಂ ಪಿ ಭಟ್, ವಿನುತಾ ವಿಶಿಷ್ಟ ಶ್ರೇಣಿ ಹಾಗೂ ವಿಜೇತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಿಗೆ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ನಿಶಾ ಪ್ರಸಾದ್ ಮಾಣೂರು ತರಭೇತಿ ನೀಡಿದ್ದಾರೆ. ಸಂಸ್ಥೆಗೆ 100 ಶೇಕಡಾ ಫಲಿತಾಂಶ ಪಡೆದಿದೆ ಎಂದು ಸಂಚಾಲಕರಾದ ಪ್ರಸಾದ್ ಎಂ ಕೆ ತಿಳಿಸಿದ್ದಾರೆ.