ಗೇರುಕಟ್ಟೆ : ಗೇರುಕಟ್ಟೆ ಕಳಿಯ ಗ್ರಾಮದ ಪುಂಡಿಕಲ್ ಕುಕ್ಕು ಅಶ್ವತ್ಥಕಟ್ಟೆಯಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಉಪನ್ಯಾಸ, ಯಕ್ಷಗಾನ ಬಯಲಾಟ ಕಾರ್ಯಕ್ರಮ ಜ.4 ರಂದು ಜರಗಿತು.
ಕುಂಟಿನಿ ರಾಘವೇಂದ್ರ ಭಾಂಗೀಣ್ಣಾಯ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ವಿಧಿವತ್ತಾಗಿ ಶ್ರೀ ಶನೀಶ್ವರ ದೇವರ ಮಹಾ ಪೂಜೆಯನ್ನು ನೆರವೇರಿಸಿದರು. ಉಜಿರೆ ಎಸ್.ಡಿ.ಎಂ.ಕಾಲೇಜು ಉಪನ್ಯಾಸಕ ಡಾ.ದಿವಾ ಕೊಕ್ಕಡ ಧಾರ್ಮಿಕ ಉಪನ್ಯಾಸ ನೀಡಿದರು. ಕುಂಟಿನಿ ರಾಘವೇಂದ್ರ ಬಾಂಗಿಣ್ಣಾಯ, ಹಿರಿಯರಾದ ಕಳಿಯ ಗ್ರಾಮದ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಅಂಗರಪಲ್ಕೆ ಉಪಸ್ಥಿತರಿದ್ದರು.
ಸ್ಥಳೀಯ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕನ್ನಡ ಉಪನ್ಯಾಸಕರಾದ ನಿವೃತ್ತ ಮೋಹನ್ ಭಟ್ ಕಲ್ಲೂರಾಯ ನೇತೃತ್ವದಲ್ಲಿ ಅತಿಥಿ ಯಕ್ಷಗಾನ ಕಲಾವಿದರಿಂದ ತ್ರಿಶಿರ-ದಶಶಿರ-ದ್ವಿದಶಶಿರ ಯಕ್ಷಗಾನ ಬಯಲಾಟ ನಡೆಯಿತು. ಕನ್ನಡ ಉಪನ್ಯಾಸಕರಾದ ಸುವರ್ಣ ಕುಮಾರಿ ಎಂ.ಕಲ್ಲೂರಾಯ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.