ನಾಳ : ನಾಳ ಹಾಲು ಉತ್ಪಾದಕರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಸಂಘದ ಅಧ್ಯಕ್ಷರಾಗಿ ಕೇಶವ ಪೂಜಾರಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಠಲ ಗೌಡ 5 ಮತಗಳನ್ನು ಗಳಿಸಿದ್ದು, ಸೋಮಪ್ಪ ಗೌಡ 8 ಮತ ಗಳಿಸಿ ವಿಜಯಿಯಾಗಿದ್ದು, ಉಪಾಧ್ಯಕ್ಷರಾಗಿ ಸೋಮಪ್ಪ ಗೌಡ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಸುಧಾಕರ ಮಜಲು. ರಮೇಶ್ ಶೆಟ್ಟಿ, ಜಗದೀಶ್, ಶ್ರೀಧರ್ ಪೂಜಾರಿ, ಬೊಮ್ಮಣ್ಣ ಗೌಡ, ವಿಠ್ಠಲ್ ಗೌಡ, ಬಾಲಕೃಷ್ಣ ಶೆಟ್ಟಿ, ಲೀಲಾವತಿ, ವಿಜಯ, ರೀತಾ, ರೇಖಾ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಕವಿತಾ ನಡೆಸಿಕೊಟ್ಟರು.