January 9, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಉಪಾಧ್ಯಕ್ಷರಾಗಿ ದಿನೇಶ್ ಕೋಟ್ಯಾನ್

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ನಿರ್ದೇಶಕರ ಸಭೆ ಜ. 6 ರಂದು ನಡೆಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹೆಚ್. ಪದ್ಮಗೌಡ 6 ನೇ ಬಾರಿಗೆ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯ ಹಾಲಿ ನಿರ್ದೇಶಕ ದಿನೇಶ್ ಕೋಟ್ಯಾನ್ ಆಯ್ಕೆಯಾದರು.

ನಿರ್ದೇಶಕರುಗಳಾದ ದಾಮೋದರ ಗೌಡ ಸುರುಳಿ, ಸುರೇಂದ್ರ ಗೌಡ ಎಸ್., ರಾಜಪ್ಪ ಯಾನೆ ಸೀತಾರಾಮ ಗೌಡ, ರಮೇಶ್ ಗೌಡ ಅಂಗಡಿಬೆಟ್ಟು, ಪ್ರವೀಣ್ ವಿಜಯ್, ಸುಕನ್ಯಾ ನಾರಾಯಣ ಸುವರ್ಣ, ಹೇಮಾ ವಚ್ಚ, ಶೀನಪ್ಪ ಗೌಡ ಕೊಲ್ಲಿಮಾ‌ರ್, ಸೀತಾರಾಮ ಬಿ. ಎಸ್., ಚಿಂಕ್ರ ಇವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಪ್ರಕ್ರಿಯೆ ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ ಸಹಕರಿಸಿದರು.

Related posts

ಉಜಿರೆಯ ಉದ್ಯಮಿ ಮೋಹನ ಮುರುಡಿತ್ತಾಯ ನಿಧನ

Suddi Udaya

ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ

Suddi Udaya

ಬೆಳಾಲು ಶ್ರೀ ಧ. ಮ. ಅನುದಾನಿತ ಪ್ರೌಢಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ

Suddi Udaya

ಮರೋಡಿ: ಏ.22ರಂದು ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

Suddi Udaya

ಕಡಿರುದ್ಯಾವರ: ಕುಚ್ಚೂರು ಬೈಲು ಶ್ರೀವನದುರ್ಗಾದೇವಿ ದೇವಸ್ಥಾನದ ಗರ್ಭಗುಡಿಗೆ ನಿಧಿ ಕುಂಭ ಸಮರ್ಪಣೆ ಹಾಗೂ ಷಡಾಧಾರ ಮುಹೂರ್ತ

Suddi Udaya
error: Content is protected !!