37.5 C
ಪುತ್ತೂರು, ಬೆಳ್ತಂಗಡಿ
April 19, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 79 ನೇ ಹುಟ್ಟುಹಬ್ಬ ಪ್ರಯುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ: ಜ. 15 ರಂದು ಬಂಗೇರ ಬ್ರಿಗೇಡ್ ನಿಂದ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಪಂದ್ಯಕೂಟ ಆಯೋಜನೆ: ಬಂಗೇರ ಬ್ರಿಗೇಡ್ ಗೌರವಾಧ್ಯಕ್ಷೆ ಪ್ರೀತಿತಾ ಬಂಗೇರರವರಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಕಳೆದ 5 ದಶಕಗಳಿಂದ ರಾಜಕೀಯ ಜೀವನದಲ್ಲಿ ಜನಸೇವೆ ಹಾಗೂ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡ ಮಾಜಿ ಶಾಸಕರಾದ ದಿ‌.ಕೆ ವಸಂತ ಬಂಗೇರ ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಬಂಗೇರ ಬ್ರಿಗೇಡ್ ಗೌರವಾಧ್ಯಕ್ಷೆ ಪ್ರೀತಿತಾ ಬಂಗೇರ ಹೇಳಿದರು.

ಅವರು ಜ. 8 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಂಗೇರ ಬ್ರಿಗೇಡ್‌ ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀಮತಿ ಬಿನುತಾ ಬಂಗೇರರವರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂ‌ರ್ ಕಬಡ್ಡಿ ಅಸೋಸಿಯೇಷನ್‌ ಇದರ ಸಹಭಾಗಿತ್ವದಲ್ಲಿ ಮಾಜಿ ಹೊನಲು ಬೆಳಕಿನ ಪುರುಷರ ಮುಕ್ತ ಹಾಗೂ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಮ್ಯಾಟ್ ಕಬಡ್ಡಿ ಪಂದ್ಯಾಟವು ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಜ. 15 ರಂದು ನಡೆಯಲಿದೆ ಎಂದರು.

ಬೆಳಿಗ್ಗೆಯಿಂದ ಮರುದಿನ ಬೆಳಿಗ್ಗೆಯವರೆಗೆ ವಿವಿಧ ವಿಭಾಗದಲ್ಲಿ ಕಬಡ್ಡಿ ಪಂದ್ಯಾವಳಿಯು ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ.ಕೆ ವಸಂತ ಬಂಗೇರರವರ ಧರ್ಮಪತ್ನಿ ಶ್ರೀಮತಿ ಸುಜಿತಾ ವಿ ಬಂಗೇರ ವಹಿಸಲಿದ್ದಾರೆ.ಆರೀಕೋಡಿ ಧರ್ಮದರ್ಶಿ ಹರೀಶ್ ,ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ರಾಕೇಶ್ ಮಲ್ಲಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಎಂದರು.

ಪುರುಷರ ಮುಕ್ತ ವಿಭಾಗ ಪಂದ್ಯಾವಳಿಯಲ್ಲಿ ಪ್ರಥಮ : ರೂ.30,000/- ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ,ದ್ವಿತೀಯ : ರೂ. 20,000/-ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ,ತೃತೀಯ : ರೂ. 10,000/-ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ,ಚತುರ್ಥ : ರೂ. 10,000/- ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ ಹಾಗೂ
ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಆಲ್ ರೌಂಡ‌ರ್ ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಹಿಸಲಾಗುವುದು ಎಂದರು.

ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗದಲ್ಲಿ ಪ್ರಥಮ : ರೂ.10,000/- ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ,ದ್ವಿತೀಯ : ರೂ. 7,000/- ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ,ತೃತೀಯ : ರೂ. 5,000/- ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ,ಚತುರ್ಥ : ರೂ.5,000/- ನಗದು ಮತ್ತು ಬಂಗೇರ ಬ್ರಿಗೇಡ್‌ ಟ್ರೋಫಿ ಹಾಗೂ ಬೆಸ್ಟ್‌ ರೈಡರ್, ಬೆಸ್ಟ್ ಕ್ಯಾಚ‌ರ್, ಆಲ್ ರೌಂಡ‌ರ್ ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಹಿಸಲಾಗುತ್ತದೆ.ಟೂರ್ನಿಯಲ್ಲಿ ಭಾಗವಹಿಸಿದ ಪ್ರತಿಯೊಂದು ಹೈಸ್ಕೂಲಿನ ತಂಡಗಳಿಗೆ ಶಾಶ್ವತ ಫಲಕ ಮತ್ತು ಸೆಮಿಫೈನಲ್‌ ತಲುಪಿದ ತಂಡಗಳ ಸದಸ್ಯರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ,ಪಟ್ಟಣ ಪಂಚಾಯತ್ ಸದಸ್ಯೆ ರಾಜಶ್ರೀ ರಮಣ್,ವೇದಾಂತ್ ,ಬಂಗೇರ ಬ್ರಿಗೇಡ್ ಪ್ರಮುಖರಾದ ಅನೂಪ್ ಬಂಗೇರ,ರಾಕೇಶ್ ಮೂಡುಕೋಡಿ,ಸಲೀಂ ಗುರುವಾಯನಕೆರೆ ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಭಿತ್ತಿಪತ್ರಿಕೆ ಸ್ಪರ್ಧೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: 12 ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆ

Suddi Udaya

ನೆರಿಯ: ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

Suddi Udaya

ಕಳೆಂಜ: ಮನೆ ಪಂಚಾಂಗ ದೂಡಿ ಹಾಕಿದ ಪ್ರಕರಣ: ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲು

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya
error: Content is protected !!