ಮಿತ್ತಬಾಗಿಲು: ಮಲವಂತಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಸಂಚಲನಾ ಸಮಿತಿ ವತಿಯಿಂದ ರಾಜೇಶ್ ಎಸ್. ಶಾಂತಿ ಇವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ, ಬಹ್ಮಶ್ರೀ ಗುರು ಭವನ ಉದ್ಘಾಟನೆಯು ಜ.11 ಮತ್ತು 12 ರಂದು ನಡೆಯಲಿದೆ.
ಜ.11 ರಂದು ಸಾಯಂಕಾಲ 3.30ಕ್ಕೆ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಮೆರವಣಿಗೆ, ಹಾಗೂ ತಂತ್ರಿವರ್ಯರ ಆಗಮನ, ಹೊರೆಕಾಣಿಕೆ ಮೆರವಣಿಗೆ, ಸಂಜೆ 6 ರಿಂದ ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷ ಸದಾಶಿವ ಪೂಜಾರಿ ರವರಿಂದ ಉಗ್ರಾಣ ಮುಹೂರ್ತ ಉದ್ಘಾಟನೆ, ಸಂಜೆ 6.30 ರಿಂದ ಪಂಚಗವ್ಯ, ಸ್ವಸ್ತಿ ಪುಣ್ಯಾದ, ದೇವತಾ ಪ್ರಾರ್ಥನೆ, ಬಿಂಬ ಶುದ್ಧಿ, ಸುದರ್ಶನ ಹೋಮ, ವಾಸ್ತು ರಾಕ್ಷೋಘ್ನ ಹೋಮ, ಬಿಂಬ ವಾಸ್ತು, ವಾಸ್ತು ಬಲಿ, ಪ್ರಾಕಾರ ಬಲಿ, ಮಂಡಲ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5-45 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9.30 ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆ ಇವರಿಂದ ಯಕ್ಷಗಾನ ಪ್ರದರ್ಶನ ಬಪ್ಪನಾಡು ಕ್ಷೇತ್ರ ಮಹಾತ್ಮೆ ನಡೆಯಲಿದೆ.
ಜ.12 ರಂದು ಪ್ರಾತಃಕಾಲ 5ಕ್ಕೆ ಗಣಹೋಮ, ತೋರಣ ಮುಹೂರ್ತ, ಕಲಶ ಪೂಜೆ, ಪ್ರಧಾನ ಹೋಮ, ಶಿಖರ ಪ್ರತಿಷ್ಠೆ, ಬ್ರಹ್ಮಶ್ರೀ ನಾರಾಯಣ ಗುರು ಮೂರ್ತಿ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಗುರುಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ, ಸಂಜೆ 4-45ಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ ರವರಿಂದ ಐಶ್ವರ್ಯ ಪೂಜೆ ನಡೆಯಲಿದೆ.
ಪೂರ್ವಾಹ್ನ 11ಕ್ಕೆ ಬ್ರಹ್ಮಶ್ರೀ ಗುರುಭವನ ಉದ್ಘಾಟನೆಯನ್ನು ಮಾಜಿ ಸಚಿವ ಜನಾರ್ಧನ ಪೂಜಾರಿ ನೆರವೇರಿಸಲಿದ್ದಾರೆ. ಮಂಗಳೂರು-ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಚಿತ್ತರಂಜನ್, ಕುದ್ರೋಳಿ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ಹಾಗೂ ವಿವಿಧ ಗಣ್ಯರು ಉಪಸ್ಥಿತರಿರುವರು.
ಸಂಜೆ 7 ಕ್ಕೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕಲಶೋತ್ಸವ ಸಮಿತಿ ಅಧ್ಯಕ್ಷ ಮುಕುಂದ ಸುವರ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ, ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಮಾಜಿ ಶಾಸಕ ಹರೀಶ್ ಕುಮಾರ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಂಟ್ವಾಳ ಉಪವಿಭಾಗದ ಡಿವೈಎಸ್ ಪಿ ವಿಜಯ ಪ್ರಸಾದ್, ಮಂಗಳೂರು ಆಂತರಿಕ ಭದ್ರತಾ ವಿಭಾಗದ ಸಹಾಯಕ ಪೊಲೀಸ್ ನಿರೀಕ್ಷಕರು ಗೋಪಾಲಕೃಷ್ಣ ಕುಂದರ್ ಭಾಗವಹಿಸಲಿದ್ದಾರೆ.