18.8 C
ಪುತ್ತೂರು, ಬೆಳ್ತಂಗಡಿ
January 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅದಿತಿ ಮುಗೆರೋಡಿ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ಅದಿತಿ ಮುಗೆರೋಡಿ ಇವರು ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ.

ಅವರು, ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ಸುದರ್ಶನ್ ಎಂ ಎಲ್ ಭಟ್ ಇವರ ಶಿಷ್ಯೆ ವಿದುಷಿ ಡಿಂಪಲ್ ಶಿವರಾಜ್ ಇವರಿಂದ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆ ಇಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಪೂರೈಸಿದ ಅತೀ ಕಿರಿಯ ಅಭ್ಯರ್ಥಿಯಾದ ಅದಿತಿ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮುಂಜ ಇಲ್ಲಿನ 5ನೇ ತರಗತಿ ವಿದ್ಯಾರ್ಥಿನಿ. ಇವರು ಮಂಜುಳಾ ಮತ್ತು ಪುರುಷೋತ್ತಮ ಮುಗೆರೋಡಿ ದಂಪತಿಯ ಪುತ್ರಿ.

Related posts

ಕಲ್ಮಂಜ: ಸಿದ್ದಬೈಲು ಪರಾರಿ ಸ.ಹಿ.ಪ್ರಾ. ಶಾಲೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಪುರುಷರ ತ್ರೋಬಾಲ್ ಪಂದ್ಯಾಟದಲ್ಲಿ ಬಂದಾರು ಗ್ರಾಮ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷ, ಉದ್ಯಮಿ ಪೃಥ್ವಿ ರಂಜನ್ ರಾವ್ ಹೃದಯಾಘಾತದಿಂದ ನಿಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ವಿ. ಶ್ರೀನಿವಾಸ್ ನಿಯೋಜನೆ

Suddi Udaya
error: Content is protected !!