ಬಳಂಜ: ನಾಲ್ಕೂರು ಶ್ರೀ ಮಾತಾ ಇವರ ನೇತೃತ್ವದಲ್ಲಿ ಖ್ಯಾತ ಕಂಬಳ ಓಟಗಾರರು ದಿ| ರಮಾನಂದ ಪೂಜಾರಿ ಯೈಕುರಿ ಇವರ ಸ್ಮರಣಾರ್ಥ ತಾಲೂಕು ಮಟ್ಟದ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಜ.11 ರಂದು ಬಳಂಜ ಕೊಡಮಣಿತ್ತಾಯ ದೈವದ ಆವರಣದಲ್ಲಿ ಸಂಜೆ 7 ರಿಂದ ನಡೆಯಲಿದೆ.
ಕ್ರೀಡಾಂಗಣ ಉದ್ಘಾಟನೆಯನ್ನು ಗುರುವಾಯನಕೆರೆ ನಿಸರ್ಗ ಕರ್ಟನ್ಸ್ ಮಾಲಕ ನಾಗೇಶ್ ಕೋಟ್ಯಾನ್ ಬರಾಯ ನೆರವೇರಿಸಲಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ವಿಜಯ ಪೂಜಾರಿ ಯೈಕುರಿ ನೆರವೇರಿಸಲಿದ್ದು,ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ಭಾರತ್ ಆಟೋ ಕಾರ್‍ಸ್ ಉದ್ಯೋಗಿ ಪ್ರವೀಣ್ ಕುಮಾರ್ ಎಚ್.ಎಸ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದ ಬಳಂಜದ ಯುವಕ ಮನೋಹರ್ ಪೂಜಾರಿ ಕೆಂಪುಂರ್ಜ ರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಯುವಶಕ್ತಿ ನಾಲ್ಕೂರು- ಟೀಮ್ ಯುವಶಕ್ತಿ, ಎನ್..ಕೆ ಅಟ್ಯಾಕರ್ಸ್- ನೀಲಯ್ಯ ಕಾವೋಡಿ, ಎಸ್.ವಿಎಸ್ ಬಳಂಜ- ಸತೀಶ್ ದೇವಾಡಿಗ, ಕೋಟಿ ಚೆನ್ನಯ್ಯ- ರವೀಂದ್ರ ಡಿ. ಅಮೀನ್, ಶುಭೋದಯ ಸಾವ್ಯ-ವಿನೀತ್ ಕೋಟ್ಯಾನ್, ಭಜರಂಗಿ ಬಾಯ್ಸ್-ಸ್ವಸ್ತಿಕ್ ಆರ್ಯ, ಶ್ರೀ ವಿಷ್ಣು ಕಟ್ಟೆ-ಕಾಸಿಂ ಕಟ್ಟೆ, ಧರ್ಮ ಶಾಸ್ತ ಮಲೆಬೆಟ್ಟು- ಗಿರೀಶ್ ಮಲೆಬೆಟ್ಟು, ಶಿವ ಪ್ರೆಂಡ್ಸ್ ಸೂರ್ಯ -ದಿಕ್ಷೀತ್ ಸೂರ್ಯ, ಸಂಗಮ್ ಪ್ರೆಂಡ್ಸ್ -ರಾಜ್ ಕಿಶನ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ 10000/- ನಗದು ಮತ್ತು ಶ್ರೀ ಮಾತಾ ಟ್ರೋಫಿ, ದ್ವಿತೀಯ 6000/- ನಗದು ಮತ್ತು ಶ್ರೀ ಮಾತಾ ಟ್ರೋಫಿ, ತೃತೀಯ 3000/- ನಗದು ಮತ್ತು ಶ್ರೀ ಮಾತಾ ಟ್ರೋಫಿ, ಚತುರ್ಥ 3000/- ನಗದು ಮತ್ತು ಶ್ರೀ ಮಾತಾ ಟ್ರೋಫಿ ಸಿಗಲಿದೆ ಎಂದು ಶ್ರೀಮಾತ ನಾಲ್ಕೂರು ಸಂಘಟನೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.