ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ , ಧರ್ಮಸ್ಥಳ ಇದರ ಸಂಯುಕ್ತ ಆಶ್ರಯದಲ್ಲಿ ಜನಜಾಗೃತಿ ವೇದಿಕೆಯ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕೈಂಕರ್ಯದಲ್ಲಿ ಪಾಲುದಾರರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ಸಮಾವೇಶವು ಜ.10 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿ ಮಾತನಾಡಿ ದುಶ್ವಟಕ್ಕೆ ಒಳಗಾದವರಲ್ಲಿ ಅರಿವು ಮೂಡಿಸುವ ದೊಡ್ಡ ಕೆಲಸವನ್ನು ಜನಜಾಗೃತಿ ವೇದಿಕೆ ಮಾಡುತ್ತಿದೆ ಎಂದರು.
ಉದ್ಘಾಟನೆಯನ್ನು ಜ್ಞಾನವಿಕಾಸ ಮಹಿಳಾ ಅಧ್ಯಕ್ಷರು ಮಾತೃಶ್ರೀ ಡಾ। ಹೇಮಾವತಿ ವೀ. ಹೆಗ್ಗಡೆಯವರು ನೆರವೇರಿಸಿ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆ ನೂರಾರು ಗೆಲ್ಲುಗಳಿರುವ ದೊಡ್ಡ ವೃಕ್ಷವಿದ್ದಂತೆ.ಇದರಿಂದ ನಾನಾ ರೀತಿಯಲ್ಲಿ ಫಲ ದೊರೆಯುತ್ತಿದೆ.ಅನೇಕ ರೋಗಗಳು ಶರೀರಕ್ಕೆ ಅಂಟಿಕೊಳ್ಳುವಂತೆ ಕುಡಿತ ಕೂಡ ಒಂದು ರೀತಿಯ ರೋಗ.ಇದನ್ನು ಹೋಗಲಾಡಿಸಲು ಅನೇಕ ಕಡೆ ವೇದಿಕೆಯಿಂದ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಟ್ರಸ್ಟಿ ಶ್ರೀಮತಿ ಶ್ರದ್ಧಾ ಅಮಿತ್ ಅವರು”ಕತ್ತಲ ಕುಡುಕರ ಬೆಳಕಿನ ಮಕ್ಕಳು” ಸತೀಶ್ ಬೆಳೆಗಾರ ಬರೆದ ಪುಸ್ತಕ ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಆಶಯ ನುಡಿಗಳ್ನಾಡಿ ಭಗವಂತನನ್ನು ನಂಬುವುದು ಮತ್ತು ಅರಿತುಕೊಳ್ಳುವುದು ಬಹಳ ಮುಖ್ಯ. ಪೂಜ್ಯ ಖಾವಂದರು ತ್ಯಾಗ ಮತ್ತು ಸಮಾಜಸೇವೆಯಿಂದ ಹಲವಾರು ಪರಿವರ್ತನೆಯ ಕೆಲಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ 2025-27 ನೇ ಸಾಲಿಗೆ ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಬಾದಾಮಿಯ ನಟರಾಜ್ ಅವರನ್ನು ಘೋಷಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷ ರಾಜಣ್ಣ ಮೂ. ಕೊರವಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ, ಟ್ರಸ್ಟ್ ಟ್ರಸ್ಟಿಗಳಾದ ಡಾ| ಪಿ.ವಿ. ಭಂಡಾರಿ, ಡಾ| ಶ್ರೀನಿವಾಸ್ ಭಟ್, ವಿ. ರಾಮಸ್ವಾಮಿ,ಯೋಜನೆಯ ಹಣಕಾಸು ವಿಭಾಗದ ಮುಖ್ಯಸ್ಥ ಶಾಂತರಾಮ್ ಪೈ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಾರ್ಯದರ್ಶಿ ವಿವೇಕ್ ವಿ. ಪಾಯಸ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ,ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.