ನಿಡ್ಲೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ರಮೇಶ್ ರಾವ್, ಧನಂಜಯ ಗೌಡ ಕಳೆಂಜ, ವಿಜಯ ಕುಮಾರ್ ಹೆಚ್, ಜಯರಾಮ ಪಾಳಂದ್ಯೆ ಎಸ್, ಆನಂದ ಗೌಡ ಎಂ.,ಕೆ. ಹೇಮಂತ ಗೌಡ, ಹಿಂದುಳಿದ ವರ್ಗ ಎ ಮೋಹನ್ ಪೂಜಾರಿ ಬಿ., ಹಿಂದುಳಿದ ವರ್ಗ ಬಿ ಧನಂಜಯ ಬಿ., ಮಹಿಳಾ ಮೀಸಲು ಕ್ಷೇತ್ರ ಗಾಯತ್ರಿ ಹೆಚ್. ಗೌಡ, ವಿಜಯಲಕ್ಷ್ಮೀ ಕೆ., ಪ.ಜಾತಿ ಕ್ಷೇತ್ರದಿಂದ ರಾಜು, ಪ.ಪಂ. ಕ್ಷೇತ್ರ ಡೀಕಯ್ಯ ಎಂ.ಕೆ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಅಶೋಕ್ ಭಟ್ ಕೆ., ಗಣೇಶ್ ಗೌಡ ಬಿ., ಮಾಧವ ಗೌಡ ಎಂ., ವೀರೇಂದ್ರ ಕುಮಾರ್, ಶ್ಯಾಮ್ ಪ್ರಕಾಶ್ ಭಟ್, ಸೆಬಾಸ್ಟಿನ್ ಪಿ. ಟಿ. ಯಾನೆ ಕುಟ್ಟಪ್ಪ, ಹಿಂದುಳಿದ ವರ್ಗ ಎ -ಸೋಮಪ್ಪ ಪೂಜಾರಿ , ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ವಾಸಪ್ಪ ಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಐಶ್ವರ್ಯ ಜೆ. ಶೆಟ್ಟಿ, ಪ್ರೇಮ, ಪ.ಜಾತಿ ಕ್ಷೇತ್ರ ಶ್ರೀಧರ್ ಎಸ್., ಪ. ಪಂಗಡ ಆನಂದ ಮಲೆಕುಡಿಯ ಸ್ಪರ್ಧಿಸಲಿದ್ದಾರೆ.