ತೆಕ್ಕಾರು: ಸರಕಾರಿ ಶಾಲೆ ಎಂದರೆ ಅವ್ಯವಸ್ಥೆಗಳ ಆಗರ ಎಂದು ಮೂಗು ಮುರಿಯುವ ಇಂದಿನ ಕಾಲದಲ್ಲಿ ಮೂಲಭೂತ ವ್ಯವಸ್ಥೆಗಳಿಗಾಗಿ ಹೆಣಕಾಡುವ ಪರಿಸ್ಥಿತಿಯಲ್ಲಿ ಇಲ್ಲೊಬ್ಬರು ಉದಾರದಾನಿ, ಕೊಡುಗೈ ದಾನಿಯಾದ ಅಬ್ಬಾಸ್ ಮಡಿಕೇರಿ ಬೆಟ್ಟು ರವರ ಪುತ್ರ ಮಹಮದ್ ಫಯಾಜ್ ಶಾಲೆಗೆ ಸರಿಸುಮಾರು ರೂ.40,000ಕ್ಕೂ ಅಧಿಕ ಮೌಲ್ಯದ ಲ್ಯಾಪ್ ಟಾಪ್ ಅನ್ನು ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶಾಲಾ ಶೈಕ್ಷಣಿಕ ಅನುಕೂಲಕ್ಕಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಎಸ್ .ಡಿ .ಎಂ. ಸಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.