September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆರು ಜನ ನಕ್ಸಲರು ಶರಣಾಗತಿ ಬೆನ್ನಲ್ಲೇ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

ಬೆಳ್ತಂಗಡಿ : ಆರು ಜನ ನಕ್ಸಲರು ಶರಣಾಗತಿಯಾದ ವೇಳೆ ಅವರು ಶಸ್ತಾಸ್ತ್ರಗಳನ್ನು ಯಾಕೆ ಕೊಟ್ಟಿಲ್ಲ. ಅವುಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಇದೀಗ ನಕ್ಸಲರ ಗನ್ ಗಳು ಪತ್ತೆಯಾಗಿವೆ.

ಜಯಪುರ ಸಮೀಪದ ಕಿತ್ತಲೆಗಂಡಿ ಕಾಡಿನಲ್ಲಿ ನಕ್ಸಲರು ಬಳಸುತ್ತಿದ್ದ ಶಸ್ತಾಸ್ತ್ರಗಳು ಮಣ್ಣಿನಡಿ ಹೂತಿಟ್ಟಿದ್ದು ಪತ್ತೆಯಾಗಿವೆ. ಒಂದು ಎಕೆ 56 ,ಮೂರು 303 ಬಂದೂಕು, ಒಂದು ಸಿಂಗಲ್ ಬ್ಯಾರಲ್ ಬಂದೂಕು, ಒಂದು ಪಿಸ್ತೂಲ್ ಹಾಗೂ 176 ಜೀವಂತ ಮದ್ದು ಗುಂಡುಗಳು ಪತ್ತೆಯಾಗಿವೆ.

ಆದರೆ ಗನ್ ಗಳು ಯಾರದ್ದು ಎಂದು ಪತ್ತೆಯಾಗಿಲ್ಲ. ನಕ್ಸಲೆರದ್ದೇನಾ ಎಂದು ತನಿಖೆಯಿಂದ ಗೊತ್ತಾಗಬೇಕಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ‌ ಠಾಣಾ ವ್ಯಾಪ್ತಿಯಲ್ಲಿ ಗನ್ ಗಳು ಪತ್ತೆಯಾಗಿವೆ. ಕೊಪ್ಪ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Related posts

ಮರೋಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಹಾಗೂ ಮಹಿಳಾ ದಿನಾಚರಣೆ

Suddi Udaya

ಎಸ್ ಡಿ ಎಮ್ ಕಾಲೇಜಿನಲ್ಲಿ ವಾಣಿಜ್ಯ “ವ್ಯವಹಾರ “ಹಬ್ಬ

Suddi Udaya

ಪೆರಿಂಜೆ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ

Suddi Udaya

ಬಂದಾರು ಶ್ರೀ ವಿಷ್ಣುಮೂರ್ತಿ ದೇವರ 22 ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ

Suddi Udaya

ಮುಂಡ್ರುಪ್ಪಾಡಿ: ಶಾಲೆತಡ್ಕ ರಾಮಣ್ಣ ಗೌಡರ ಮನೆ ಹಾಗೂ ಕೊಟ್ಟಿಗೆಗೆ ಬಿದ್ದ ಮರ: ಅಪಾರ ಹಾನಿ

Suddi Udaya

ಮದ್ದಡ್ಕದಿಂದ ಬಸ್ಸು ಇಲ್ಲದೆ ಪ್ರಯಾಣಿಕರು ನೇತಾಡಿ‌ಕೊಂಡು ಹೋಗುವ ಪರಿಸ್ಥಿತಿ: ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಜನರ ಮನವಿ

Suddi Udaya
error: Content is protected !!