37.6 C
ಪುತ್ತೂರು, ಬೆಳ್ತಂಗಡಿ
January 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾ.1 ರಿಂದ ದ್ವಿತೀಯ ಪಿಯು ಪರೀಕ್ಷೆ ಹಾಗೂ ಮಾ.21 ರಿಂದ ಎಸೆಸೆಲ್ಸಿ ಪರೀಕ್ಷೆ; ಅಂತಿಮ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: 2025ನೇ ವರ್ಷದ ದ್ವಿತೀಯ ಪಿಯು ಮತ್ತು ಎಸೆಸೆಲ್ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಜ.10ರಂದು ಬಿಡುಗಡೆ ಮಾಡಿದೆ.

ಮಾ. 1ರಿಂದ 20ರ ವರೆಗೆ ದ್ವಿತೀಯ ಪಿಯು ಪರೀಕ್ಷೆ ಹಾಗೂ ಮಾ. 21ರಿಂದ ಎ.4ರವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಯು ಮಂಡಳಿ ವೆಬ್‌ಸೈಟ್‌ನಲ್ಲಿ https://kseab.karnataka.gov.in ಲಭ್ಯವಿದೆ. ದ್ವಿತೀಯ ಪಿಯು ಪರೀಕ್ಷೆಯು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.

ದ್ವಿತೀಯ ಪಿಯು ಪರೀಕ್ಷೆ-1 ರ ವೇಳಾಪಟ್ಟಿ:

ಮಾ.1 ಕನ್ನಡ, ಅರೇಬಿಕ್,
ಮಾ.3 ಗಣಿತ, ಶಿಕ್ಷಣ ಶಾಸ್ತ್ರ ತರ್ಕಶಾಸ್ತ್ರ ವ್ಯವಹಾರ ಅಧ್ಯಯನ,
ಮಾ.4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾ.5 ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ
ಮಾ.7 ಇತಿಹಾಸ, ಭೌತಶಾಸ್ತ್ರ,
ಮಾ.10 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ ಭೂಗರ್ಭಶಾಸ್ತ್ರ ಗೃಹ ವಿಜ್ಞಾನ,
ಮಾ.12 ಮನಃಶಾಸ್ತ್ರ ರಸಾಯನಶಾಸ್ತ್ರ ಮೂಲ ಗಣಿತ,
ಮಾ.13 ಅರ್ಥಶಾಸ್ತ್ರ
ಮಾ.15 ಆಂಗ್ಲಭಾಷೆ,
ಮಾ.17 ಭೂಗೋಳ ಶಾಸ್ತ್ರ
ಮಾ.18 ಜೀವಶಾಸ್ತ್ರ, ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ,
ಮಾ.19 ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್ ,
ಮಾ.20 ಹಿಂದಿ.

ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ:

ಮಾ.21 ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಎನ್‌ಸಿಇಆರ್‌ಟಿ, ಸಂಸ್ಕೃತ,
ಮಾ.24 ಕೋರ್ ಸಬ್ಜೆಕ್ : ಗಣಿತ,
ಮಾ.26 ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ
ಮಾ.29 ಕೋರ್ ಸಬ್ಜೆಕ್ : ಸಮಾಜ ವಿಜ್ಞಾನ
ಎ.1 ಜೆಟಿಎಸ್ ವಿಷಯಗಳು: ಎಲೆಕ್ಟಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಎನ್‌ಎಸ್‌ಐ ಸಿ, ಸಾಮಾನ್ಯ: ಅರ್ಥಶಾಸ್ತ್ರ
ಎ.2 ಕೋರ್ ಸಜೆಕ್ಟ್ ವಿಜ್ಞಾನ; ಸಾಮಾನ್ಯ ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ

ಎ.4 ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ ಕ್ಯೂಎಫ್ ವಿಷಯಗಳು: ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಬ್ಯೂಟಿ ಆ್ಯಂಡ್ ವೆಲ್‌ ನೆಸ್, ಅಪೆರಲ್ಸ್ ಮೇಡ್ ಆಪ್ ಆ್ಯಂಡ್ ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಹಾರ್ಡ್ವೇರ್.

Related posts

ಹೊಸಂಗಡಿ -ಬಡಕೋಡಿ ಬೂತ್ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

Suddi Udaya

ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆ: ಎಸ್.ಡಿ.ಟಿ.ಯು ಚಾಲಕ ಹಾಗೂ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿಗೆ ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

Suddi Udaya
error: Content is protected !!