29.8 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ಸ್ವ ಉದ್ಯೋಗ ಆಧಾರಿತ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಮೆಹಂದಿ ಡಿಸೈನ್ ಹಾಗೂ ಮದುಮಗಳ ಶೃಂಗಾರ ಮತ್ತು ಆರಿ ವರ್ಕ್ ಹಾಗೂ ಎಂಬ್ರಾಯಿಡರಿ ಎರಡು ತರಬೇತಿಯ ಸಮಾರೋಪ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ತಾಲೂಕು ಪಂಚಾಯತ್ ತರಬೇತುದಾರ ಜಯಾನಂದ ಪಿ. ಇವರು ಮಾತನಾಡಿ ಮಹಿಳೆಯರು ಇತರರಿಗೆ ಅವಲಂಬಿಸದೆ ಸ್ವಂತ ಉದ್ದಿಮೆ ಮಾಡಿದಾಗ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು. ಪೂಜ್ಯರ ಮಾತಿನಂತೆ ನಾವು ಪದವಿ ಪಡೆದು ಇತರರ ಲೆಕ್ಕ ಬರೆಯುವ ಬದಲು ನಮ್ಮ ಲೆಕ್ಕ ನಾವೇ ಬರೆಯುವುದು ಶ್ರೇಷ್ಠ ಎಂದು. ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಈ ತರಬೇತಿಗಳು ಬಹು ಬೇಡಿಕೆ ಇರುವ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವ ಸ್ವ ಉದ್ಯೋಗವಾಗಿದೆ ಎಂದರು.

ಇವರು ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.
ಒಟ್ಟು 44 ಮಂದಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸೋಮನಾಥ್ ಕೆ, ಸಂಪನ್ಮೂಲ ವ್ಯಕ್ತಿಗಳಾದ ತುಳಸಿ ಮತ್ತು ಸೌಭಾಗ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕರಾದ ಜಯಶ್ರೀ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.

Related posts

ಫೆ.8: ಅಗ್ರಿಲೀಫ್ 2.0 – ‘ರೈತರ ಜೊತೆ ವಿಶ್ವದ ಕಡೆ’ ವಿಸ್ತೃತ ಘಟಕದ ಉದ್ಘಾಟನೆ

Suddi Udaya

ಮಾ.23-27: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಶಿರ್ಲಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಎಸ್ .ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ತ್ರಿಷಾ ರಿಗೆ ಸನ್ಮಾನ

Suddi Udaya

ಕಳೆಂಜ: ನೆಕ್ಕಾರಾಜೆ ತಿಮ್ಮಪ್ಪ ಗೌಡ ನಾಪತ್ತೆ: ಶವ ಮನೆಯ ಸಮೀಪದ ತೋಡಿನಲ್ಲಿ ಪತ್ತೆ

Suddi Udaya

ಬಳ್ಳಮಂಜ : ರಾಜೀವಿ ಶೆಟ್ಟಿ ನಿಧನ

Suddi Udaya

ಹೆದ್ದಾರಿ ಬದಿ ಬೆಂಕಿ

Suddi Udaya
error: Content is protected !!