September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಮಂಡಲದ ಹಿಂದೂ ಸಂಗಮ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಾರ್ಯ ಮಂಡಲದ ಬಾರ್ಯ, ಪುತ್ತಿಲ, ತಣ್ಣೀರುಪಂತ ಹಾಗೂ ತೆಕ್ಕಾರು ಗ್ರಾಮಗಳನ್ನು ಒಳಗೊಂಡ ಹಿಂದೂ ಸಂಗಮ ಜ.25 ರಂದು ಬಾರ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಹ ಸೇವಾ ಪ್ರಮುಖ್ ಡಾ. ಮನೋಜ್ ಜೀ ಹಿಂದೂ ಸಂಗಮದ ಮೂಲಕ ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣೆ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಎಂಬ ಆದರ್ಶಗಳನ್ನು ಜನಸಾಮಾನ್ಯರ ಬದುಕಿಗೆ ತಲುಪಿಸುವ ನಿಟ್ಟಿನಲ್ಲಿ ಸಮಾಜಕ್ಕೆ ದಿಕ್ಕು ತೋರಿಸುವ ಕಾರ್ಯಕ್ರಮಗಳಾಗಿ ಹಿಂದು ಸಂಗಮ ರೂಪುಗೊಂಡಿದೆ ಎಂದು ತಿಳಿಸಿ ಸಮಾಜಕ್ಕೆ ದಿಕ್ಕು ತೋರಿಸುವ ವಿಚಾರಧಾರೆಗಳನ್ನು ತಿಳಿಸಿದರು.

ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ, ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಸುರ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಅರ್ಚಕ ಸುಬ್ರಹ್ಮಣ್ಯ ರಾವ್, ತೆಕ್ಕಾರು ಶ್ರೀಗೋಪಾಲಕೃಷ್ಣ ದೇವಸ್ಥಾನದ ಉಪಾಧ್ಯಕ್ಷ ಅನಂತ ಪ್ರಸಾದ ನೈತಡ್ಕ, ತಣ್ಣೀರುಪಂತ ಮಹಾಮಾಯಿ ದೇವಸ್ಥಾನ ಅಧ್ಯಕ್ಷ ಗಂಗಯ್ಯ ನಾಯ್ಕ, ಪಿಲಿಗೂಡು ಶ್ರೀ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಮಹೋನ್ ಗೌಡ ಅಜಿರ, ತೆಕ್ಕಾರು ಶ್ರೀಗೋಪಾಲಕೃಷ್ಣ ಭಜನಾ ಮಂದಿರ ಅಧ್ಯಕ್ಷ ರವೀಂದ್ರ ಗೌಡ, ಬಜಾರ್ ಶ್ರೀರಾಮ ದುರ್ಗಾ ಭಜನಾ ಮಂದಿರ ಅಧ್ಯಕ್ಷ ಶ್ರೀಕೃಷ್ಣ ಐತಾಲ್, ಹೊಸಮೊಗ್ರು ಶ್ರೀ ಮಹಾಲಿಂಗೇಶ್ವರ ಭಜನಾ ಮಂದಿರ ಅಧ್ಯಕ್ಷ ಜಯಾನಂದ ಆನಲ್ಕೆ, ಬಾರ್ಯ ದೊಂಪದಬಲಿ ಕಾರ್ಯದರ್ಶಿ ಸುದರ್ಶನ್ ಕೆಮ್ಮನಬೊಟ್ಟು, ಹಿಂದೂ ಸಂಗಮದ ತಾಲೂಕು ಆಯೋಜನಾ ಸಮಿತಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ, ಉಪಾಧ್ಯಕ್ಷ ಸೇಸಪ್ಪ ಸಾಲಿಯಾನ್ ಬಾರ್ಯ, ಮನೋಹರ ಶೆಟ್ಟಿ, ಸಂಯೋಜಕ ಅನಿಲ್ ಕುಮಾರ್ ಯು ಹಾಗೂ ಬಾರ್ಯ ಮಂಡಲ ಸಂಯೋಜಕ ಲಕ್ಷ್ಮಣ ಗೌಡ ಅಜಿರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ, ಪ್ರಮುಖರಾದ ಪ್ರವೀಣ್ ರೈ ಪೊರ್ಕಳ, ಪ್ರಸನ್ನ ಗೌಡ, ಪ್ರಶಾಂತ್ ಪೈ, ರಾಜೇಶ್ ರೈ ಹೆನ್ನಡ್ಕ ಸಹಿತ ಮತ್ತಿತರರು ಭಾಗವಹಿಸಿದ್ದರು.

ದೇಶಿಯ ಗೋವಿನ ಪೂಜೆ, ಭಾರತ ಮಾತೆಗೆ ಪುಷ್ಪ ಅರ್ಚನೆ, ಸಮಾಜದ ವಿವಿಧ ಸಾಧಕರ ಗುರುತಿಸುವಿಕೆ, ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಯೋಧ್ಯ ಕರಸೇವಕರಾದ ದಿ. ರಾಮಣ್ಣ ಗೌಡ ಅಜಿರ, ದಿ.ಪೂವಪ್ಪ ಗೌಡ, ಪ್ರಭಾಕರ ಪೊಸೊಂದೋಡಿ, ಜನಾರ್ದನ ಗೌಡ ಅಜಿರ ಹಾಗ ಲಕ್ಷಣ ಗೌಡ ಅಜಿರ ಅವರಿಗೆ ಶಾಲು ಮತ್ತು ಪುಸ್ತಕ ನೀಡಿ ಗೌರವ ಸಲ್ಲಿಸಲಾಯಿತು.

Related posts

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಗೆ ಖ್ಯಾತ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಭೇಟಿ

Suddi Udaya

ಗುರುವಾಯನಕೆರೆ -ಬೆಳ್ತಂಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ರಕ್ಷಿತ್ ಅಂಡಿಂಜೆ ಆಯ್ಕೆ

Suddi Udaya

ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳರವರಿಗೆ ಹಿಮಾಲಯ ವೃಕ್ಷಮಣಿದಾರರ ಪ್ರಶಸ್ತಿ ಪ್ರದಾನ

Suddi Udaya

ಸೂಳಬೆಟ್ಟು ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya
error: Content is protected !!