ಬಂದಾರು : ಬಂದಾರು ಗ್ರಾಮದ ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸಹವದ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ತುರ್ತುಕಾರ್ಯಕ್ರಮಗಳ ನಿಮಿತ್ತ, ಪೂಜ್ಯ ಖಾವಂದರು, ಧರ್ಮಸ್ಥಳದ ಡಾ। ಡಿ. ವೀರೇಂದ್ರ ಹೆಗ್ಗಡೆಯವರು ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ ಇಂದು ಸಂಜೆ 5.30ಕ್ಕೆ ಸರಿಯಾಗಿ ಪೆರ್ಲ ಬೈಪಾಡಿ ಬಸದಿ ಬಳಿ ತಲುಪಲಿದ್ದಾರೆ.
ಅಲ್ಲಿಂದ ಬೈಪಾಡಿ ಸಿದ್ದಿವಿನಾಯಕ ಕ್ಷೇತ್ರಕ್ಕೆ ಚೆಂಡೆ ವಾದ್ಯ, ಬ್ಯಾಂಡ್ ವಾಲಗ ದೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದೆಂದು ಬ್ರಹ್ಮಕಲಶೋತ್ಸವ ಸಮಿತಿ & ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.