23.6 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಂಡಾಜೆ: ಮಂದಿರ ಮಹಾಸಂಘ ಮತ್ತು ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಆರತಿ

ಬೆಳ್ತಂಗಡಿ: ಸಾಮೂಹಿಕವಾಗಿ ಭಗವಂತನ ಉಪಾಸನೆ ಮಾಡುವುದಕ್ಕೆ ಸನಾತನ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಎಲ್ಲರೂ ಸೇರಿ, ಒಂದೇ ಮನಸ್ಸಿನಿಂದ ಸಾಮೂಹಿಕವಾಗಿ ಭಗವಂತನ ಉಪಾಸನೆ ಮಾಡುವುದರಿಂದ ಭಗವಂತನ ವಿಶೇಷ ಕೃಪೆ ನಮ್ಮ ಮೇಲೆ ಆಗುತ್ತದೆ ಮತ್ತು ಹಿಂದೂಗಳಲ್ಲಿ ಸಂಘಟನೆ ನಿರ್ಮಾಣವಾಗುತ್ತದೆ.

ಜ. 4 ಮತ್ತು 5ರಂದು ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಮಂದಿರ ಮಹಾಸಂಘದ ಅಧಿವೇಶನದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಾರದಲ್ಲಿ ಒಂದು ದಿನ ಎಲ್ಲಾ ಹಿಂದೂ ಬಾಂಧವರು ಜಾತಿ ಸಂಪ್ರದಾಯ ಎಲ್ಲವನ್ನು ಮರೆತು ದೇವಸ್ಥಾನದಲ್ಲಿ ಒಟ್ಟಿಗೆ ಸೇರಿ ಭಗವಂತನ ಸಾಮೂಹಿಕ ಮಹಾ ಆರತಿಯನ್ನು ಮಾಡಲು ನಿಶ್ಚಯಿಸಿದರು. ಇದರ ಮುಖ್ಯ ಉದ್ದೇಶವೆಂದರೆ ದೇವಸ್ಥಾನಗಳ ಸಂರಕ್ಷಣೆ, ಹಿಂದೂ ಸಮಾಜದ ಸಂಘಟನೆ ಹಾಗೂ ದೇವಸ್ಥಾನಗಳನ್ನು ಧರ್ಮ ಪ್ರಚಾರ ಕೇಂದ್ರವನ್ನಾಗಿಸುವುದು. ಈ ನಿಟ್ಟಿನಲ್ಲಿ ಮುಂಡಾಜೆಯಲ್ಲಿನ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಶುಭ ದಿನದಂದು ಸಾಮೂಹಿಕ ಆರತಿಯನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣದ ಅಗತ್ಯ, ಧರ್ಮಚರಣೆಯ ಮಹತ್ವವನ್ನು ಸನಾತನ ಸಂಸ್ಥೆಯ ಆನಂದ ಗೌಡ ಮಾರ್ಗದರ್ಶನವನ್ನು ಮಾಡಿದರು. ಉಪಸ್ಥಿತ ಎಲ್ಲಾ ಧರ್ಮ ಪ್ರೇಮಿಗಳು ಹಿಂದೂ ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ, ನಾವೆಲ್ಲರೂ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಲು ಕಟಿಬದ್ಧರಾಗಿದ್ದೇವೆ ಎಂದು ಪ್ರತಿಜ್ಞೆಯನ್ನು ಮಾಡಿದರು. ವೈಕುಂಠ ಏಕಾದಶಿಯ ನಿಮಿತ್ತ ಭಗವಾನ್ ಶ್ರೀ ಕೃಷ್ಣನ ನಾಮಜಪವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಂದಿರ ಮಹಾಸಂಘದ ಬಾಲಕೃಷ್ಣ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ , ದೇವಸ್ಥಾನದ ಆಡಳಿತ ಮಂಡಳಿಯವರು, ಅರ್ಚಕರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ನಾರಾಯಣ ಪಡ್ಕೆ ಯವರು ಅಭಿನಂದಿಸಿದರು.

Related posts

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ‘ ನಮ್ಮ ನಡಿಗೆ ಡಿಜಿಟಲ್ ಕಡೆಗೆ ‘ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮ

Suddi Udaya

ಗೇರುಕಟ್ಟೆ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಂಭ್ರಮ ಸ್ವಾತಂತ್ರ್ಯ ಆಚರಣೆ

Suddi Udaya

ಸುದ್ದಿ ಉದಯ ಫಲಶ್ರುತಿ :ಕುಸಿದು ಬಿದ್ದ ಸರಳೀಕಟ್ಟೆ ಹಿ.ಪ್ರಾ. ಶಾಲೆಯ ಹಂಚು: ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾ.ಪಂ. ಮುಖ್ಯಾಧಿಕಾರಿ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

Suddi Udaya

30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ

Suddi Udaya

ಕೊಯ್ಯೂರು ತಾಲೂಕು ಮಟ್ಟದ ಬಾಲಕ, ಬಾಲಕಿಯರ ಮ್ಯಾಟ್ ಕಬ್ಬಡಿ ಪಂದ್ಯಾಟ

Suddi Udaya
error: Content is protected !!