ಬಳಂಜ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಳಂಜದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮವು ಜ. 11ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರತ್ನಾಕರ್ ಪೂಜಾರಿ ನೆರವೇರಿಸಿದರು. ಶಾಲಾ ಮಕ್ಕಳು ಬೀದಿ ವ್ಯಾಪಾರ, ದಿನಸಿ ಅಂಗಡಿ ಮತ್ತು ಶಾಪಿಂಗ್ ಮಾಲ್ ಎಂಬ ಮೂರು ವಿಧದ ವ್ಯಾಪಾರಗಳನ್ನು ನಡೆಸಿದರು.
ಕಾರ್ಯಕ್ರಮಕ್ಕೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ, ದೈಹಿಕ ಶಿಕ್ಷಣ
ಪದಾಧಿಕಾರಿ ಶ್ರೀಮತಿ ಸುಜಯ , ಶಿಕ್ಷಣ ಸಂಯೋಜಕಿ ಶ್ರೀಮತಿ ಚೇತನಾಕ್ಷಿ ಹಾಗೂ ಪೆರೋಡಿತ್ತಾಯಕಟ್ಟೆ ಕ್ಲಸ್ಟರ್ ಸಿ.ಆರ್.ಪಿ ಕಿರಣ್ ಕುಮಾರ್ ಕೆ ಎಸ್ ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಹಾರೈಸಿದರು .
ವಿದ್ಯಾರ್ಥಿನಿ ಅನುಶ್ರೀ 6ನೇ ತರಗತಿ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ.ಆರ್. ಧನ್ಯವಾದವಿತ್ತರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.