ಕಳೆಂಜ: ಇಲ್ಲಿಯ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗರ್ಭಗೃಹದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಜ.20ರಿಂದ 23 ರವರೆಗೆ ನಡೆಯಲಿದ್ದು ಇದರ ಪೂರ್ವ ಸಿದ್ಧತಾ ಸಭೆಯು ಜ.14 ರಂದು ದೇವಸ್ಥಾನದ ವಠಾರದಲ್ಲಿ ಜರುಗಿತು.
ಕೊಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ , ವಕೀಲರಾದ ಧನಂಜಯ ರಾವ್ ಬ್ರಹ್ಮಕಲಶೋತ್ಸವ ಯಶಸ್ವಿ ಗೆ ಹೇಗೆ ತಯಾರಿ ನಡೆಸಬೇಕೆಂಬ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಧಾಕೃಷ್ಣ ರಾವ್ ಜೋಡುಸ್ಥಾನ ಧರ್ಮಸ್ಥಳ, ಆಡಳಿತ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್, ಆಡಳಿತ ಸಮಿತಿ ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ, ಆಡಳಿತ ಸಮಿತಿ ಖಜಾಂಚಿ ಕೇಶವ ಗೌಡ ಬರೆಮೇಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ ಭಟ್ ಕಾಯಡ, ಕಾರ್ಯದರ್ಶಿ ಕೇಶವ ಗೌಡ ಮಲ್ಲಜಾಲು, ಖಜಾಂಚಿ ವೆಂಕಪ್ಪ ಗೌಡ ಮೂಡಾಯಿಮಜಲು, ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಗೌಡ, ಕಾರ್ಯದರ್ಶಿ ವಿನಯ್ ಗೌಡ, ಹಾಗೂ ಆಡಳಿತ ಸಮಿತಿ ಸದಸ್ಯರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.