ಪುಂಜಾಲಕಟ್ಟೆ : ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 17ನೇ ವರ್ಷದ ಸಾಮೂಹಿಕ ವಿವಾಹ ಬಂಗ್ಲೆ ಮೈದಾನದಲ್ಲಿ ಮಾ. 16ರಂದು ನಡೆಯಲಿದ್ದು, ಅರ್ಹ ವಧು-ವರರು ಫೆ. 25ರ ಒಳಗೆ ಸೂಕ್ತ ದಾಖಲೆ ಪತ್ರಗಳೊಂದಿಗೆ ಕ್ಲಬ್‌ನ ಕಚೇರಿಯನ್ನು ಸಂಪರ್ಕಿಸಬಹುದು.
ವಿವಾಹವಾಗುವ ವಧುವಿಗೆ ಚಿನ್ನದ ತಾಳಿ ಹಾಗೂ ವಧು-ವರರಿಗೆ ಮಂಗಳ ವಸ್ತ್ರ ನೀಡಲಾಗುವುದು. ಹಾಗೂ ಸರಕಾರದ ವತಿಯಿಂದ ಪ್ರತಿಜೋಡಿಯ ಖಾತೆಗೆ 50 ಸಾವಿರ ರೂ. ನೀಡಲಾಗುವುದು. ಕೇವಲ ಹತ್ತು ಜೋಡಿಗೆ ಮಾತ್ರ ಅವಕಾಶವಿದ್ದು, ಅವಿಭಜಿತ ದ.ಕ. ಜಿಲ್ಲೆಯ ಅನಾಥ, ಬಡ ಕುಟುಂಬದವರಿಗೆ ಪ್ರಥಮ ಆದ್ಯತೆ ನೀಡುವುದಾಗಿ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.