ಉಜಿರೆ: ಉಜಿರೆಯ ಕೆ. ಎನ್. ಎಸ್ ಟವರ್ ಬಳಿ ಮಹಿಳೆಯರಿಗೆಂದೇ ಆಧುನಿಕ ವಿನ್ಯಾಸದ ರೀತಿಯಲ್ಲಿ ತಯಾರುಗೊಂಡ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಜ.14 ರಂದು ಶುಭಾರಂಭಗೊಂಡಿತು
ಉಜಿರೆಯ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರು ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅಥಿತಿಗಳಾಗಿ ಶಾಸಕ ಹರೀಶ್ ಪೂಂಜ , ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಪ್ರತಾಪ್ ನಾಯಕ್ ಕೆ , ಕೆ. ಎನ್. ಎಸ್ ಟವರ್ ಇದರ ಮಾಲಕರಾದ ಮೋಹನ್ ಶೆಟ್ಟಿಗಾರ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಷಾಕಿರಣ ಕಾರಂತ್ ಉಪಸ್ಥಿತರಿದ್ದು ಶುಭಹಾರೈಸಿದರು.
ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ವಿಶೇಷವಾಗಿ ಮಹಿಳೆಯರಿಗೆಂದೇ ಸಿದ್ಧಗೊಂಡ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಉಜಿರೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಮಳಿಗೆಯ ಮಾಲಿಕರಾದ ನೇತ್ರ ಶಶಿ ಕುಮಾರ್ ಇವರು ಹೇಳುತ್ತಾ ಬಂದಂತಹ ಅಥಿತಿಗಳನ್ನು ಸ್ವಾಗತಿಸಿ, ಸತ್ಕರಿಸಿದರು .