ನಿಡ್ಲೆ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿ ಸೋಲನ್ನು ಕಂಡಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಕೆ. ರಮೇಶ್ ರಾವ್ (497), ಧನಂಜಯ ಗೌಡ ಕಳೆಂಜ (559), ವಿಜಯ ಕುಮಾರ್ ಹೆಚ್. (583), ಜಯರಾಮ ಪಾಳಂದೆ ಎಸ್. (435), ಆನಂದ ಗೌಡ ಎಂ (501), ಕೆ. ಹೇಮಂತ್ ಗೌಡ (463), ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಮೋಹನ ಪೂಜಾರಿ ಬಿ. (494), ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಧನಂಜಯ ಬಂಡೇರಿ (507), ಮಹಿಳಾ ಕ್ಷೇತ್ರದಿಂದ ಗಾಯತ್ರಿ ಹೆಚ್. ಗೌಡ (524), ವಿಜಯಲಕ್ಷ್ಮೀ ಕೆ. (485 ), ಪ.ಜಾತಿ ಕ್ಷೇತ್ರದಿಂದ ರಾಜು (506), ಪ. ಪಂಗಡ ಕ್ಷೇತ್ರದಿಂದ ಡೀಕಯ್ಯ ಎಂ.ಕೆ. (575) ಜಯಭೇರಿ ಭಾರಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತರಾದ ಅಶೋಕ್ ಭಟ್ (348) ಗಣೇಶ್ ಗೌಡ (315), ಮಾಧವ ಗೌಡ (280), ವೀರೇಂದ್ರ ಕುಮಾರ್ (280), ಶ್ಯಾಮ್ ಪ್ರಕಾಶ್ ಭಟ್ (260), ಸೆಬಾಸ್ಟಿನ್ ಪಿ.ಟಿ (339), ಐಶ್ವರ್ಯ ಜೆ. ಶೆಟ್ಟಿ (333), ಪ್ರೇಮ (284), ಸೋಮಪ್ಪ ಪೂಜಾರಿ (280), ವಾಸಪ್ಪ ಗೌಡ (281), ಶ್ರೀಧರ ಎಸ್.(292) ಆನಂದ ಮಲೆಕುಡಿಯ (203) ಮತ ಪಡೆದು ಸೋಲು ಅನುಭವಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಕಾರ್ಯನಿರ್ವಹಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪದ್ಮನಾಭ ಹಾಗೂ ಸಿಬ್ಬಂದಿಗಳು ಸಹಕರಿಸಿದರು.