ತೆಂಕಕಾರಂದೂರು : ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಜ. 31 ರಿಂದ ಫೆ.04 ರ ತನಕ ನಡೆಯಲಿರುವ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಜ.15 ರಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ರೈ ಕಾರಂದೂರು, ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಅಂಗಡಿಬೆಟ್ಟು, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಕುಕ್ಕೆಟ್ಟು, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನೇಸರ, ಗೌರವ ಸಲಹೆಗಾರರಾದ ಶ್ರೀವಿಷ್ಣು ಸಂಪಿಗೆತ್ತಾಯ, ಜಗದೀಶ್ ಗೌಡ ಕಜೆಬೆಟ್ಟು, ದೇವಾಲಯದ ಅರ್ಚಕರಾದ ಶಂಕರ ನಾರಾಯಣ ಉಪಾಧ್ಯಾಯ, ಉಪಾಧ್ಯಕ್ಷ ಶರತ್ ಕಾಡಬಾಗಿಲು, ಭಜನಾ ಮಂಡಳಿ ಕಾರ್ಯದರ್ಶಿ ನಿತಿನ್ ಶೆಟ್ಟಿ ಪಳಿಕೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜಯಂತ್ ಕುಲಾಲ್ ಒಡದಕರಿಯ, ಯೋಗೀಶ್ ಗೌಡ ಗಿಳಿಕಾಪು, ಪ್ರಕಾಶ್ ದೇವಾಡಿಗ ಮಿಲ್ ಬಲಿ, ಉಪಸ್ಥಿತರಿದ್ದರು.