22.1 C
ಪುತ್ತೂರು, ಬೆಳ್ತಂಗಡಿ
January 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಮತ್ತೊಮ್ಮೆ ಸಹಕಾರ ಭಾರತಿ ಬಿಜೆಪಿ ಅಧಿಕಾರದ ಗದ್ದುಗೆಗೆ, ಬಿಜೆಪಿ-11ಸ್ಥಾನ, ಸಾಲೇತರ ಪಕ್ಷೇತರ- 1 ಸ್ಥಾನ

ಮುಂಡಾಜೆ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.

ಸಾಲೇತರ ಪಕ್ಷೇತರ ಅಭ್ಯರ್ಥಿ 1ಸ್ಥಾನ ಪಡೆದುಕೊಂಡಿದ್ದಾರೆ.

ಭಾರಿ ಕುತೂಹಲ ಕೆರಳಿಸಿದ ಮುಂಡಾಜೆ ಸಿಎ ಬ್ಯಾಂಕಿನ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕಜೆ ವೆಂಕಟೇಶ್ವರ ಭಟ್,ಪ್ರಕಾಶ ನಾರಾಯಣ ರಾವ್,ರವಿ ಪೂಜಾರಿ, ರಾಘವ ಗೌಡ ಕುಡುಮಡ್ಕ,ಅಜಯ್ ಕಲ್ಲಿಕಾಟ್ ಆ್ಯಂಟನಿ,ಅಶ್ವಿನಿ ಹೆಬ್ಬಾರ್,ಮೋಹಿನಿ,ಎಂ.ಶಶಿಧರ ಕಲ್ಮಂಜ,ಶಿವಪ್ರಸಾದ್ ಗೌಡ ದೇವಸ್ಯ,ರಾಘವ ಕಲ್ಮಂಜ,ಚೆನ್ನಕೇಶವ ಅರಸಮಜಲು ಜಯಗಳಿಸಿದರು. ಹಾಗೂ ಸಾಲೇತರ ಪಕ್ಷೇತರ ಅಭ್ಯರ್ಥಿ ಸುಮಾ ಎಂ ಗೋಖಲೆ ವಿಜಯಿಯಾದರು.

ಜ. 19 ರಂದು ಚುನಾವಣೆ ನಡೆದಿದ್ದು ಚುನಾವಣಾಧಿಕಾರಿಯಾಗಿ ಪ್ರತಿಮಾ ಬಿ.ವಿ ಸಹಕರಿಸಿದರು.ಮುಂಡಾಜೆ ಸಿಎ ಬ್ಯಾಂಕಿನ‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಪ್ರಭು ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Related posts

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉದ್ದಿಮೆದಾರರ ಕಾರ್ಯಗಾರ

Suddi Udaya

ಅಗಲಿದ ಹಿರಿಯ ಸಾಹಿತಿ ಕೆ. ಟಿ. ಗಟ್ಟಿಯವರಿಗೆ ಉಜಿರೆಯಲ್ಲಿ ಶ್ರದ್ಧಾಂಜಲಿ

Suddi Udaya
error: Content is protected !!