ತೆಕ್ಕಾರು ಗ್ರಾಮದ ಉಪ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಜ.18 ರಂದು ಮನವಿ ಸಲ್ಲಿಸಿದರು.
ದಿನಾಂಕ 25/09/2023 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ತೆಕ್ಕಾರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ತೆರೆಯುವಂತೆ ಮನವಿಯನ್ನು ಸಲ್ಲಿಸಿರುತ್ತೇವೆ. ಮನವಿಗೆ ಸಚಿವರು ಮತ್ತು ಆರೋಗ್ಯ ಇಲಾಖೆಯವರು ಸ್ಪಂದಿಸಿ ಉಪ ಆರೋಗ್ಯ ಕೇಂದ್ರವನ್ನು ಮಂಜೂರುಗೊಳಿಸಿದ್ದು, ತೆಕ್ಕಾರು ಗ್ರಾಮದ ನಾಗರಿಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದ್ದರು.
ಆದರೆ ಉಪ ಆರೋಗ್ಯ ಕೇಂದ್ರವನ್ನು ತೆರೆಯಲು ಸ್ವಂತ ಕಟ್ಟಡ ಇರುವುದಿಲ್ಲ ಈಗ ಬಾಡಿಗೆ ಕಟ್ಟಡದಲ್ಲಿ ಉಪ ಆರೋಗ್ಯ ಕೇಂದ್ರವನ್ನು ತೆರೆದಿರುತ್ತೇವೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 63/1ಪಿ1 ರಲ್ಲಿ 0.10 ಸೆಂಟ್ಸ್ ವಿಸ್ತೀರ್ಣ ಈಗಾಗಲೇ ಉಪ ಆರೋಗ್ಯ ಕೇಂದ್ರಕ್ಕೆ ಮಂಜೂರಾತಿಗೊಂಡು ದಾಖಲೆ ಪತ್ರಗಳು ಇರುತ್ತದೆ. ಆದ್ದರಿಂದ ಉಪ ಆರೋಗ್ಯ ಕೇಂದ್ರದ ಸ್ವಂತ ಕಟ್ಟಡ ನಿರ್ಮಿಸಲು ಅನುದಾನವನ್ನು ಮಂಜೂರುಗೊಳಿಸಬೇಕಾಗಿ ತೆಕ್ಕಾರು ಗ್ರಾಮದ ನಾಗರಿಕರ ಪರವಾಗಿ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ಮನವಿ ಸಲ್ಲಿಸಿದರು.